ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !
Salman Khan Juhi Chawla : ಬಾಲಿವುಡ್ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್ ಖಾನ್ ಮದುವೆಯಾಗಲು ಬಯಸಿದ್ದರಂತೆ.
ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಉಳಿದಿರುವ ಸಲ್ಮಾನ್ ಖಾನ್ ಮದುವೆ ವಿಚಾರದ ಬಗ್ಗೆ ಇಂಟರೆಸ್ಟಿಂಗ್ ಸಂಗತಿಯೊಂದಿದೆ.
ಒಂದು ಕಾಲದಲ್ಲಿ ಸಲ್ಮಾನ್ ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿದ್ದರಂತೆ. ಇದನ್ನು ಖುದ್ದು ಸಲ್ಮಾನ್ ಖಾನ್ ಹೇಳಿಕೊಂಡಿದ್ದರು.
1990 ರ ಸುಮಾರಿಗೆ ಸಲ್ಮಾನ್ ಖಾನ್ ನೀಡಿದ ಸಂದರ್ಶನದ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದರಲ್ಲಿ ಜೂಹಿ ತುಂಬಾ ಸ್ವೀಟ್, ಅವಳು ಮುದ್ದಾಗಿದ್ದಾಳೆ ಎಂದಿದ್ದರು.
ನಾನು ಅವಳನ್ನು ಮದುವೆಯಗುವುದಾಗಿ ಅವರ ತಂದೆಗೆ ಕೇಳಿದ್ದೆ. ಆದರೆ ಅವರು ನಿರಾಕರಿಸಿದರು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಸಲ್ಮಾನ್ ಮತ್ತು ಜೂಹಿ ದೀವಾನಾ ಮಸ್ತಾನಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. 1997 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಜೂಹಿ ಚಾವ್ಲಾ 1995 ರಲ್ಲಿ ಉದ್ಯಮಿ ಜೈ ಮೆಹ್ತಾ ಅವರನ್ನು ಮದುವೆಯಾದರು. ಜೂಹಿ ಚಾವ್ಲಾ ತಮ್ಮ ವೃತ್ತೀಜೀವನಕ್ಕೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಈ ಮದುವೆ ವಿಚಾರವನ್ನು 6 ವರ್ಷಗಳ ಕಾಲ ಮುಚ್ಚಿಟ್ಟಿದ್ದರು.