ಸಲ್ಮಾನ್ ಖಾನ್ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿವೆ 3 ಬಂಗಲೆಗಳು, ಜಿಮ್, ಸ್ವಿಮ್ಮಿಂಗ್ ಪೂಲ್ ಜೊತೆಗೆ ಇಷ್ಟೆಲ್ಲಾ ಸೌಕರ್ಯ

Fri, 05 May 2023-1:01 pm,

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಸುಂದರವಾದ ಪನ್ವೆಲ್ ಫಾರ್ಮ್‌ಹೌಸ್ ತುಂಬಾ ಐಷಾರಾಮಿ ಆಗಿದ್ದು ಎಂತಹವರನ್ನೇ ಆದರೂ ಬೆರಗಾಗುವಂತೆ ಮೋಡಿ ಮಾಡಬಲ್ಲದು. 

ನಟ ಸಲ್ಮಾನ್ ಖಾನ್ ಅವರ ಈ ಐಷಾರಾಮಿ ಫಾರ್ಮ್‌ಹೌಸ್ 150 ಎಕರೆ ವಿಸ್ತ್ರೀರ್ಣ ಪ್ರದೇಶದಲ್ಲಿ ಹರಡಿದೆ. ಇದರ ಬೆಲೆ ಸುಮಾರು 80 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರ ಮೌಲ್ಯವೇ ಇದು ಎಷ್ಟು ಐಷಾರಾಮಿಯಾಗಿದೆ ಎಂಬುದರ ಕಲ್ಪನೆಯನ್ನು ನೀಡುತ್ತದೆ. 

ಇನ್ನು ಸಲ್ಮಾನ್ ಖಾನ್ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ ಮೂರು ಭವ್ಯವಾದ ಫಾರ್ಮ್‌ಹೌಸ್‌ಗಳನ್ನು ನಿರ್ಮಿಸಲಾಗಿದೆ. ಸಲ್ಮಾನ್ ಖಾನ್ ಈ ಫಾರ್ಮ್‌ಹೌಸ್‌ಗೆ ಅರ್ಪಿತಾ ಫಾರ್ಮ್ ಎಂದು ನಾಮಕರಣ ಮಾಡಿದ್ದಾರೆ. ಈ ಫಾರ್ಮ್‌ಹೌಸ್‌ನಲ್ಲಿ ಭವ್ಯವಾದ ಭಂಗಲೆಗಳ ಜೊತೆಗೆ ಕುದುರೆ ಸವಾರಿ, ಜಿಮ್, ಸ್ವಿಮ್ಮಿಂಗ್ ಪೂಲ್ ನಂತಹ ಸೌಲಭ್ಯಗಳು ಸಹ ಇವೆ. 

ಲಾಕ್ಡೌನ್ ಸಮಯದಲ್ಲಿ ಈ ಫಾರ್ಮ್‌ಹೌಸ್‌ನಲ್ಲಿ ಸಲ್ಲು ಭಾಯ್ ಕೃಷಿ ಕೆಲಸ ಮಾಡುತ್ತಿರುವ ಕೆಲವು ಫೋಟೋ ವಿಡಿಯೋಗಳನ್ನು ಕೂಡ ಹಂಚಿಕೊಂಡಿದ್ದರು. ಆ ಸಮಯದಲ್ಲಿ ಸಲ್ಮಾನ್ ಖಾನ್ ಅವರ ಈ ಫೋಟೋ ವಿಡಿಯೋಗಳು ಸಖತ್ ವೈರಲ್ ಆಗಿದ್ದವು.  

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'  ಸಿನಿಮಾ ಬಿಡುಗಡೆಯಾಯಿತು. ಇತ್ತೀಚೆಗಷ್ಟೇ ಸಿನಿಮಾ ರಿಲೀಸ್ ಬಳಿಕ  ಸಲ್ಲು ಭಾಯ್ ಈಜುಕೊಳದಲ್ಲಿ ರಿಲಾಕ್ಸ್ ಮೂಡ್ ನಲ್ಲಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋ ಕೂಡ ಅವರ ಫಾರ್ಮ್‌ಹೌಸ್‌ನಲ್ಲಿ ತೆಗೆದಿರುವ ಫೋಟೋ ಆಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link