ಎಲ್ಲ ಗರ್ಲ್ ಫ್ರೆಂಡ್ಸ್ ನನ್ನನ್ನು ಬಿಡಲು ಕಾರಣವೇ ನನ್ನಲ್ಲಿರುವ ಈ ದೋಷ - ಸತ್ಯ ಬಿಚ್ಚಿಟ್ಟ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಕೋಟ್ಯಾಂತರ ರೂಪಾಯಿ ಆಸ್ತಿ ಇದ್ದರೂ, ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಆಗಿದ್ದಾರೆ. ಸಲ್ಮಾನ್ ಖಾನ್ ಎಲ್ಲೆ ಹೋದರೂ ಕೇಳುವ ಮೊದಲ ಪ್ರಶ್ನೆ ಮದುವೆ ಬಗ್ಗೆಯೇ ಆಗಿರುತ್ತದೆ. ಪ್ರತಿ ಬಾರಿ ಈ ಪ್ರಶ್ನೆ ಬಂದಾಗೆಲ್ಲ ಸಲ್ಮಾನ್ ನಗುವಿನಿಂದಲೇ ಉತ್ತರ ನೀಡುತ್ತಾರೆ.
ಸಲ್ಮಾನ್ ಖಾನ್ ಜೀವನದಲ್ಲಿ ಹಲವು ಹುಡುಗಿಯರು ಬಂದಿದ್ದರು ಎನ್ನಲಾಗುತ್ತದೆ. ಖ್ಯಾತ ನಟಿಯರೊಂದಿಗೆ ಸಲ್ಮಾನ್ ಹೆಸರು ಥಳಕು ಹಾಕಿಕೊಂಡಿದೆ ಎನ್ನಲಾಗುತ್ತದೆ. ಕೆಲವು ನಟಿಯರ ಜೊತೆ ಇನ್ನೇನು ಮದುವೆ ಆಗುತ್ತೆ ಎನ್ನುವಷ್ಟರಲ್ಲಿ ಸಂಬಂಧಗಳೂ ಅರ್ಧಕ್ಕೆ ಮುರಿದು ಬಿದ್ದಿವೆ.
ಅದೊಂದು ಸಮಯದಲ್ಲಿ ಸಲ್ಮಾನ್ ಖಾನ್ ಮದುವೆಯ ಆಮಂತ್ರಣ ಪತ್ರಿಕೆ ಸಹ ಪ್ರಿಂಟ್‌ಆಗಿತ್ತಂತೆ. ಮದುವೆಗೆ ಸಕಲ ಸಿದ್ಧತೆಗಳೂ ನಡೆದಿದ್ದವು. ಆದರೆ 5 ದಿನ ಬಾಕಿ ಇರುವಾಗ ಮದುವೆ ಬೇಡ ಎಂದು ಬಿಟ್ಟರಂತೆ.
ಸಲ್ಮಾನ ಖಾನ್ ವಯಸ್ಸು 58 ಆದರೂ ಇನ್ನೂ ಮದುವೆಯಾಗಿಲ್ಲ. ಈ ಬ್ಗಗೆ ಅವರ ಅಭಿಮಾನಿಗಳಲ್ಲಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿದೆ. ಖಾಸಗಿ ವಾಹಿನಿಯೊಂದರ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಸಲ್ಮಾನ್ ಇದಕ್ಕೆ ಉತ್ತರಿಸಿದ್ದಾರೆ.
ಇನ್ನೂ ಮದುವೆಯಾಗದಿರಲು ನಿಜವಾದ ಕಾರಣವನ್ನು ಸಲ್ಮಾನ್ ಖಾನ್ ಬಿಚ್ಚಿಟ್ಟಿದ್ದಾರೆ. ಮದುವೆಯಾಗುವ ಎಲ್ಲ ಬಯಕೆಗಳು ನನ್ನಲ್ಲಿತ್ತು. ಆದರೆ ಮದುವೆ ಆಗಬೇಕು ಎಂದುಕೊಂಡವರೆಲ್ಲ ನನ್ನನ್ನು ಬಿಟ್ಟು ಹೋದರು. ಮೊದಲನೇ ಹುಡುಗಿ ಹೋದಾಗ ನನ್ನದೇನೂ ತಪ್ಪಿಲ್ಲ ಎಲ್ಲವೂ ಆಕೆಯದ್ದೇ ತಪ್ಪು ಅಂದುಕೊಂಡೆ.
ಎರಡನೇ ಹುಡುಗಿ ಹೋದಾಗಲೂ ಆಕೆಯಲ್ಲಿಯೇ ಕೊರತೆ ಹುಡುಕಿದೆ. ಮೂರನೆ, ನಾಲ್ಕನೇ ಹುಡುಗಿ ಬಿಟ್ಟಾಗ ಕೊಂಚ ಯೋಚಿಸಲು ಆರಂಭಿಸಿದೆ. ಇದೇ ಮುಂದುವರೆದಾಗ ತಪ್ಪು ನನ್ನಲ್ಲೇ ಇರಬಹುದೇನೋ ಅನಿಸಲು ಆರಂಭಿಸಿತು.
ನಾನು ಹುಡುಗಿಯರ ನಿರೀಕ್ಷೆಯನ್ನು ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ ಅನಿಸುತ್ತದೆ. ಹಾಗಾಗಿ ನಾನೇ ಅವರ ನೀರೀಕ್ಷೆಯ ಮಟ್ಟ ತಲುಪಿಲ್ಲ ಎಂಬ ಸತ್ಯ ನನಗೆ ಅರಿವಾಯಿತು ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ.