`ನಾನು ಮದುವೆಯಾಗಿದ್ದೇನೆ`..ರಹಸ್ಯವಾಗಿ ಮದುವೆಯಾಗಿದ್ದಾರಾ ಸಲ್ಮಾನ್ ಖಾನ್..? ಶಾರುಖ್ ಖಾನ್ ಬಳಿ ಹೇಳಿದ್ದಾರಂತೆ ಮದುವೆ ಕುರಿತ ಸತ್ಯ..!
ಬಾಲಿವುಡ್ ನ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸದಾ ಸುದ್ದಿಯಲ್ಲಿರುತ್ತಾರೆ. ಸಲ್ಮಾನ್ ಯಾವಾಗ ಮದುವೆಯಾಗುತ್ತಾರೆ ಎಂಬ ಒಂದೇ ಒಂದು ಪ್ರಶ್ನೆ ನಟನ ಅಭಿಮಾನಿಗಳನ್ನು ಸದಾ ಕಾಡುವ ಪ್ರಶ್ನೆ. ಇದೀಗ ಈ ಎಲ್ಲಾ ಅನುಮಾನಗಳಿಗೆ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಉತ್ತರ ನೀಡಿದ್ದಾರೆ.
ಕೆಲವು ವರ್ಷಗಲ ಹಿಂದೆ ಶಾರುಖ್ ಖಾನ್ ನಡೆಸಿ ಕೊಡುತ್ತಿದ್ದ ಕಾರ್ಯಕ್ರಮಕ್ಕೆ ಹೋಗಿದ್ದ ಸಲ್ಮಾನ್ ಖಾನ್‌ರವರನ್ನು, ಶಾರುಖ್ ಖಾನ್ "ನೀವು ಮದವೆ ಯಾವಾಗ ಆಗುತ್ತೀರಾ ? ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಸಲ್ಮಾನ್ ಖಾನ್ ನೀಡಿದ ಉತ್ತರ ಶಾರುಖ್ ಖಾನ್ ಅವರಿಗೂ ಶಾಕ್ ನೀಡುವಂತಿತ್ತು.
ಮದುವೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್ ಖಾನ್ 'ನಾನು ಮದುವೆಯಾಗಿದ್ದೇನೆ ಎಂಬುದೇ ರಹಸ್ಯ' ಎಂದಿದ್ದರು. ಈ ಉತ್ತರ ಕೇಳಿದ ಶಾರುಖ್ ಖಾನ್‌ಗೆ ಅಘಾತ ಆಗಿತ್ತು, ಉತ್ತರವನ್ನು ಕನ್‌ಫರ್ಮ್ ಮಾಡಿಕೊಳ್ಳು ಶಾರುಖ್ ಮತ್ತೊಮ್ಮೆ ಏನು? ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್ "ಮದುವೆ ಬಗ್ಗೆ ಸದಾ ಪ್ರಶ್ನೆಗಳನ್ನು ಕೇಳುತ್ತಾ ಜನರು ನನಗೆ ತೊಂದರೆ ನೀಡುತ್ತಾರೆ, ಅದರಿಂದ ಈ ರೀತಿ ಸುಳ್ಳುಗಲನ್ನು ಹೇಳ ಬೇಕಾಗಿದೆ" ಎಂದಿದ್ದಾರೆ.
ಇದಾದ ನಂತರ ಶಾರುಖ್ ಖಾನ್ ಸಲ್ಮಾನ್ ಮದುವೆ ಯಾವಾಗ? ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಭಾಯಿಜಾನ್, 'ಕನಸಿನಲ್ಲಿ' ಎಂದು ಹೇಳುತ್ತಾರೆ. ಆಗ ಶಾರುಖ್ ಖಾನ್ ಕನಸಿನಲ್ಲಿ ಯಾರೊಂದಿಗೆ ಮದುವೆ ಆಗಿದೆ ಎಂದು ಕೇಳಿದ ಪ್ರಶ್ನೆಗೆ ‘ಕನಸಿನಲ್ಲಿ ಆ ಹುಡುಗಿಯನ್ನು ಕಂಡಾಗಲೆಲ್ಲ ಎಚ್ಚರಗೊಳ್ಳುತ್ತೇನೆ, ಅದಕ್ಕೇ ಆ ಹುಡುಗಿಯನ್ನು ನೋಡಲೇ ಇಲ್ಲ’ ಎನ್ನುತ್ತಾರೆ ಸಲ್ಮಾನ್.
ತನ್ನ ಮದುವೆಯ ವಿಷಯದ ಕಾರಣ ಸದಾ ಸುದ್ದಿಯಲ್ಲಿರುವ ಸಲ್ಮಾನ್ ಖಾನ್ ನಟಿ ಸಂಗೀತಾ ಬಿಜಲಾನಿ ಅವರನ್ನು ಮದುವೆಯಾಗಲು ಹೊರಟಿದ್ದರು ಆದರೆ ಕೊನೆಯಲ್ಲಿ ಈ ಮದುವೆ ಮುರಿದುಬಿತ್ತು. ಇದಾದ ನಂತರ ಸಲ್ಮಾನ್ ಜೀವನಕ್ಕೆ ಐಶ್ವರ್ಯಾ ರೈ ಎಂಟ್ರಿ ಕೊಟ್ಟಿದ್ದರು. ಇಬ್ಬರೂ ಸುಮಾರು ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು ಆದರೆ ನಂತರ ಈ ಸಂಬಂಧವೂ ಮುರಿದು ನಟಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಇದಾದ ನಂತರ ಅಂದಿನಿಂದ ಇಂದಿನವರೆಗೂ ಸಲ್ಮಾನ್ ಖಾನ್ ಮದುವೆಯಾಗದೆ ಒಂಟಿಯಾಗಿ ಕಾಲ ಕಳೆಯುತ್ತಿದ್ದಾರೆ.