ತಂದೆ ಮೃತದೇಹದ ಮುಂದೆ ಅಳುತ್ತಾ ಕುಳಿತ್ತಿದ್ದ ಹುಡುಗಿ ಸಲ್ಮಾನ್‌ ಖಾನ್‌ಗೆ ತಂಗಿ ಆಗಿದ್ದು ಹೇಗೆ ಗೊತ್ತಾ..?

Thu, 08 Aug 2024-9:26 am,

ಸಲ್ಮಾನ್ ಖಾನ್ ಮತ್ತು ಅವರ ತಂಗಿ ಅರ್ಪಿತಾ ಖಾನ್ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಅರ್ಪಿತಾ ಸಲ್ಮಾನ್ ಅವರ ನಿಜವಾದ ಸಹೋದರಿ ಅಲ್ಲ ಎಂಬುದು ನಿಮಗೆ ತಿಳಿದಿದೆಯೇ. ಆಕೆಯ ತಂದೆ ಸಲೀಂ ಖಾನ್ ಮತ್ತು ಹೆಲೆನ್ ಅರ್ಪಿತಾಳನ್ನು ರಸ್ತೆಯಿಂದ ಎತ್ತಿಕೊಂಡು ಬಂದಿದ್ದರು. ವರದಿಗಳ ಪ್ರಕಾರ, ಅರ್ಪಿತಾ ಅವರ ತಾಯಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ರಸ್ತೆಯಲ್ಲಿ ಏಕಾಂಗಿಯಾಗಿ ಅಳುತ್ತಿರುವುದನ್ನು ಕಂಡ ಸಲೀಂ ಖಾನ್ ಅವರಿಗೆ ದುಖ ತಡೆಯಲು ಸಾಧ್ಯವಾಗದೆ ಅರ್ಪಿತಾಳನ್ನು ತನ್ನ ಮನೆಗೆ ಕರೆತಂದರಂತೆ. ಇದಾದ ಬಳಿಕ ಸಲ್ಮಾನ್ ತಂದೆ ಅವರನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದರಂತೆ.

ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಅವರನ್ನು ತುಂಬಾ ಪ್ರೀತಿಸುತ್ತಾರೆ. ಅವರ ಲೋನಾವಾಲಾ ಫಾರ್ಮ್‌ಹೌಸ್ ಕೂಡ ಅವರ ಸಹೋದರಿಯ ಹೆಸರಿನಲ್ಲಿದೆ. ತನ್ನ ಸಹೋದರಿಯ ಪ್ರತಿಯೊಂದು ಆಸೆಯನ್ನು ಪೂರೈಸಲು ಸಲ್ಮಾನ್‌ ಖಾನ್‌ ಪ್ರಯತ್ನಿಸುತ್ತಾರೆ.   

ವರದಿಗಳ ಪ್ರಕಾರ, ಅರ್ಪಿತಾ ಮದುವೆಗೂ ಮುನ್ನ ಅರ್ಜುನ್ ಕಪೂರ್ ಜೊತೆ ಡೇಟ್‌ ಮಾಡುತ್ತಿದ್ದರಂತೆ.   

ಅರ್ಪಿತಾ ಖಾನ್ ಲಂಡನ್‌ನಲ್ಲಿ ಫ್ಯಾಷನ್ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಅಧ್ಯಯನ ಮಾಡಿದ್ದಾರೆ. ತನ್ನ ಗೆಳೆಯ ಆಯುಷ್ ಶರ್ಮಾ ಅವರೊಂದಿಗೆ ಅರ್ಪಿತಾ ನವೆಂಬರ್ 18 ರಂದು ವಿವಾಹವಾದರು. ಈ ಮದುವೆಯ ಅತಿಥಿಗಳ ಪಟ್ಟಿಯಲ್ಲಿ ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿಗಳ ಜೊತೆಗೆ ರಾಜಕೀಯ ಜಗತ್ತಿನ ತಾರೆಯರು ಕೂಡ ಇದ್ದರು.  

ಅರ್ಪಿತಾ ಮತ್ತು ಆಯುಷ್ ಒಂದು ಪಾರ್ಟಿಯಲ್ಲಿ ಭೇಟಿಯಾದರು. ಆಯುಷ್ ಮೊದಲ ನೋಟದಲ್ಲೇ ಅರ್ಪಿತಾಳನ್ನು ಪ್ರೀತಿಸತೊಡಗಿದ. ಈ ಪಾರ್ಟಿಯಲ್ಲಿಯೇ ಸಲ್ಮಾನ್ ತಂಗಿಗೆ ಮೊಣಕಾಲೂರಿ ಕುಳಿತು ಪ್ರಪೋಸ್ ಮಾಡಿದ್ದರಂತೆ.  

ಆಯುಷ್ ಶರ್ಮಾ ಒಬ್ಬ ಉದ್ಯಮಿ ಮತ್ತು ರಾಜಕೀಯ ಕುಟುಂಬಕ್ಕೆ ಸೇರಿದವರು. ಅವರ ತಂದೆ ಹಿಮಾಚಲ ಸರ್ಕಾರದಲ್ಲಿ ಸಚಿವರಾಗಿದ್ದರು. ಐವರು ಒಡಹುಟ್ಟಿದವರಲ್ಲಿ ಅರ್ಪಿತಾ ಕಿರಿಯವಳು. ಸಲ್ಮಾನ್, ಅರ್ಬಾಜ್, ಅಲ್ವಿರಾ, ಸೊಹೈಲ್ ಅರ್ಪಿತಾ ಅವರನ್ನು ದತ್ತು ಪಡೆದವರಂತೆ ಅಲ್ಲದೆ ಸ್ವಂತದವರಂತೆ ತುಂಬಾ ಪ್ರೀತಿಸುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link