Kitchen Tips: ಮಳೆಗಾಲದಲ್ಲಿ ಮಸಾಲೆ ಕೆಡದಂತೆ ರಕ್ಷಿಸುವುದು ಹೇಗೆ ? ಇಲ್ಲಿದೆ ಸುಲಭ ಟಿಪ್ಸ್
ಉಪ್ಪು, ಸಕ್ಕರೆ ಅಥವಾ ಇತರ ಮಸಾಲೆ ವಸ್ತುಗಳನ್ನು ಯಾವಾಗಲೂ ಗಾಜಿನ ಡಬ್ಬದಲ್ಲಿ ಹಾಕಿ ಇಡಬೇಕು. ಗಾಜಿನ ಡಬ್ಬಗಳು ಕೂಡಾ ಗಾಳಿಯಾಡದಂತೆ ಇರಬೇಕು. ಗಾಳಿಯಾಡದ ಡಬ್ಬದಲ್ಲಿ ಇಟ್ಟರೆ, ತೇವಾಂಶವು ಒಳಗೆ ಹೋಗುವುದಿಲ್ಲ.
ಲವಂಗವು ತೇವಾಂಶವನ್ನು ಹೀರಿಕೊಳ್ಳುತ್ತದೆ. ಆದ್ದರಿಂದ, ನೀವು ಕೆಲವು ಲವಂಗ ಮೊಗ್ಗುಗಳನ್ನು ಬಟ್ಟೆಯಲ್ಲಿ ಕಟ್ಟಿ ಉಪ್ಪು ಅಥವಾ ಸಕ್ಕರೆಯ ಜಾರ್‌ನಲ್ಲಿ ಇಡಬಹುದು. ಈ ಲವಂಗ ತೇವಾಂಶ ಹೀರಿಕೊಳ್ಳುತ್ತದೆ.
ಅಕ್ಕಿಯ ಸಣ್ಣ ಕಟ್ಟು ಉಪ್ಪನ್ನು ತೇವವಾಗದಂತೆ ತಡೆಯಬಲ್ಲದು. ಮಳೆಗಾಲದಲ್ಲಿ ಉಪ್ಪು ಅಥವಾ ಸಕ್ಕರೆಯನ್ನು ಡಬ್ಬದಲ್ಲಿ ಹಾಕುವ ಮೊದಲು, ಒಂದು ಬಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಕಟ್ಟಿ, ಆ ಡಬ್ಬದಲ್ಲಿ ಹಾಕಿಡಿ. ಹೀಗೆ ಮಾಡುವುದರಿಂದ ಅಕ್ಕಿ ಡಬ್ಬದ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಉಪ್ಪು ಮತ್ತು ಸಕ್ಕರೆಯನ್ನು ತೇವಗೊಳ್ಳುವುದಿಲ್ಲ.
ಬ್ಲಾಟಿಂಗ್ ಪೇಪರ್ ಕೂಡ ಅಕ್ಕಿಯಂತೆ ಕೆಲಸ ಮಾಡುತ್ತದೆ. ಬಿಸ್ಕತ್ ಪ್ಯಾಕೆಟ್ ಅನ್ನು ದೊಡ್ಡ ಬ್ಲಾಟಿಂಗ್ ಪೇಪರ್‌ನಲ್ಲಿ ಸುತ್ತಿ ಮತ್ತು ಗಾಳಿಯಾಡದ ಡಬ್ಬದಲ್ಲಿ ಇರಿಸಿದರೆ ಬಿಸ್ಕತ್ತು ತೇವಗೊಂಡು ಕೆಡುವುದಿಲ್ಲ.
ಮಸಾಲೆಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ, ಫ್ರೀಜರ್‌ನಲ್ಲಿ ಇಡಬಹುದು. ಯಾವ ಮಸಾಲೆ ಗಳನ್ನೂ ಹೆಚ್ಚಾಗಿ ಬಳಸುವುದಿಲ್ಲ, ಅಂತಹವುಗಳನ್ನು ಫ್ರೀಜರ್‌ನಲ್ಲಿ ಇಡಬಹುದು. ಹೀಗೆ ಮಾಡುವುದರಿಂದ ಹೆಚ್ಚು ಸಮಯದವರೆಗೆ ಅದನ್ನು ಬಳಸಲು ಸಾಧ್ಯವಾಗುತ್ತದೆ.