ಉಪ್ಪು ನೀರನ್ನು ಹೀಗೆ ಬಳಸಿದ್ರೆ ರಾತ್ರಿ ಸುಖವಾದ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತೆ!
ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಪ್ಪು ನೀರು ಅತ್ಯುತ್ತಮ ಪರಿಹಾರವಾಗಿದೆ.
ನಿತ್ಯ ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಅದರಲ್ಲಿ ಕೆಲಹೊತ್ತು ಕಾಲು ನೆನೆಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಉಪ್ಪು ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ಇದು ದೇಹಕ್ಕೆ ರಿಲೀಫ್ ನೀಡಿ ಶರೀರಕ್ಕೆ ಪುನರ್ಯೌವನವನ್ನು ನೀಡುತ್ತದೆ.
ಉಪ್ಪು ನೀರು ದೇಹಕ್ಕೆ ಮೆಗ್ನೀಸಿಯಮ್ ಒದಗಿಸಿ ಸ್ನಾಯುಗಳ ಊತವನ್ನು ಕಡಿಮೆ ಮಾಡುತ್ತದೆ. ಇದು ಆರಾಮದಾಯಕ ನಿದ್ರೆಗೆ ಪ್ರೇರೇಪಿಸುತ್ತದೆ.
ಕೆಲವರಿಗೆ ಸಂಧಿವಾತ ಸಮಸ್ಯೆಯಿಂದಾಗಿ ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ ಬಿಸಿ ನೀರಿನಲ್ಲಿ ಉಪ್ಪು ಹಾಕಿ ಕಾಲನ್ನು ನೆನೆಸುವುದರಿಂದ ಸಂಧಿವಾತ ನೋವು ಕಡಿಮೆಯಾಗಿ ಸುಖವಾದ ನಿದ್ರೆ ಪಡೆಯಬಹುದು.
ಬಿಸಿ ನೀರಿನಲ್ಲಿ ಉಪ್ಪು ಹಾಕಿ ಕಾಲು ನೆನೆಸುವುದರಿಂದ ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಮೈ-ಕೈ ನೋವು ನಿವಾರಣೆಯಾಗಿ ಸುಲಭವಾಗಿ ನಿದ್ರೆಗೆ ಜಾರಬಹುದು.
ರಾತ್ರಿ ಮಲಗುವ ಮುನ್ನ ಉಪ್ಪು ಹಾಕಿದ ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ಕಾಲು ನೋವು ನಿವಾರಣೆಯಾಗಿ ಸುಖ ನಿದ್ರೆ ಪಡೆಯಲು ಸಹಕಾರಿ ಆಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.