ಮೆಟ್ಟೂರು ಜಲಾಶಯದಲ್ಲಿ ಕಾವೇರಿ ಮಾತೆಗೆ ಸಾಲೂರುಶ್ರೀ ಪೂಜೆ
ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಕಳೆದ ಎರಡು ದಿನಗಳಿಂದ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಕಾವೇರಿ ಆರ್ಭಟಕ್ಕೆ ಮೆಟ್ಟೂರು ಭರ್ತಿ: 120 ಅಡಿ ಸಾಮಾರ್ಥ್ಯದ ಮೆಟ್ಟೂರು ಜಲಾಶಯವು ಕಾವೇರಿ ಆರ್ಭಟಕ್ಕೆ ಭರ್ತಿಯಾಗಿದೆ. ಅಣೆಕಟ್ಟೆಗೆ ಕೇವಲ 7 ದಿನಗಳಲ್ಲಿ 59 ಅಡಿಗಳಷ್ಟು ನೀರು ಬಂದಿದೆ. ಜುಲೈ 20ರಂದು ಮೆಟ್ಟೂರು ಜಲಾಶಯದಲ್ಲಿ 61 ಅಡಿ ನೀರು ಸಂಗ್ರಹವಾಗಿತ್ತು. ಜುಲೈ 27ರ ವೇಳೆಗೆ ಇದು 120 ಅಡಿಗೆ ಏರಿಕೆಯಾಗಿತ್ತು.
ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟು ಮಾಡುವುದಿಲ್ಲ ಎಂದು ಮೆಟ್ಟೂರು ಶಾಸಕ ಸದಾಶಿವಂ ಹೇಳಿದ್ದಾರೆ.ಪೂಜೆ ಸಲ್ಲಿಕೆ ವೇಳೆ, ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರಘು ಇತರರು ಇದ್ದರು.
ಪ್ರತಿವರ್ಷವೂ ಕರ್ನಾಟಕ ಮತ್ತು ತಮಿಳುನಾಡಿಗೆ ಕಾವೇರಿ ಕೃಪೆ ಇರಲಿ, ಎರಡೂ ರಾಜ್ಯದ ರೈತರ ಉತ್ತಮ ನೀರು ಪಡೆದು ಬೆಳೆ ಚೆನ್ನಾಗಿ ಬೆಳೆಯಲಿ, ಕಾವೇರಿ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.