Samantha: ಬೋಲ್ಡ್‌ ಫೋಟೋಶೂಟ್‌ ಶೇರ್‌ ಮಾಡಿ ತನ್ನನು ತಾನು ಡ್ರ್ಯಾಗನ್‌ ಎಂದ ಸ್ಯಾಮ್!!

Sun, 24 Mar 2024-9:53 am,

ಸೌತ್‌ ಸುಂದರಿ ಸಮಂತಾ ರುತ್‌ ಪ್ರಭು ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ, ಬ್ಲೇಜರ್‌ ಬಟನ್‌ ತೆಗೆದು ಹಾಟ್‌ ಆಗಿ ಬೋಲ್ಡ್‌ ಫೋಟೋಶೂಟ್‌ ಮಾಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.  

ನಟಿ ಸಮಂತಾ ತಮ್ಮ ಬೋಲ್ಡ್‌ ಆಗಿ ಮಿಂಚಿದ ಫೋಟೋಗಳು ವೈರಲ್‌ ಆಗಿದ್ದು, ಸೋಶಿಯಲ್ ಮೀಡಿಯಾವನ್ನೇ ಶೇಕ್ ಮಾಡುವಂತೆ ಇದೆ. ಪೋಸ್ಟ್‌ನ ಕ್ಯಾಪ್ಶನ್‌ನಲ್ಲ್‌ ಈ ನಟಿ ʻಡಿಸ್ನಿಯ ರಾಜಕುಮಾರಿಯಾಗಿ ಸೋತಿದ್ದೇನೆ. ಇದೀಗ ಡ್ರ್ಯಾಗನ್‌ ನಾನುʼ ಎಂದು ಬರೆದುಕೊಂಡಿದ್ದಾರೆ.

ಸಮಂತಾ ಗ್ಲಾಮರಸ್‌ ಫೋಟೋಗಳಿನ ಪೋಸ್ಟ್‌ಗೆ ಈಗಾಗಲೇ ಹನ್ನೊಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಜೊತೆಗೆ ನಾನಾ ಬಗೆ ಬಗೆಯ ಕಾಮೆಂಟ್‌ಗಳು ಸಹ ಹರಿದು ಬಂದಿದೆ.  

ಸೌತ್‌ ತಾರೆ ಸಮಂತಾ ಬೋಲ್ಡ್‌ ಫೋಟೋಸ್‌ಗೆ  ಪಡ್ಡೆ ಹುಡುಗರು ಫಿದಾ ಆಗಿ ಬ್ಲ್ಯಾಕ್ ಲೇಡಿಯೆಂದು ಕಮೆಂಟ್‌ ಮಾಡಿದರೇ, ಇನ್ನೊಬ್ಬರು ಮಿಸ್ಸಿಂಗ್ ಓಲ್ಡ್ ಸ್ಯಾಮ್ ಎಂದು ಕಮೆಂಟ್ ಹಾಕಿದ್ದಾರೆ. ಮತ್ತೆ ಕೆಲವರು ಶಾಕಿಂಗ್ ರಿಯಾಕ್ಷನ್ ನೀಡಿದ್ದಾರೆ.  

ಸಮಂತಾ ರುತ್‌ ಕೊನೆಯದಾಗಿ ಕಳೆದ ವರ್ಷ ತೆರೆಕಂಡ ಖುಷಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ ಆಗಿದ್ದಾರೆ.

ನಟಿ ಸಮಂತಾ ರುತ್‌ ಸಿನಿಮಾ ಕೆಲಸಗಳಿಗೆ ಬ್ರೇಕ್‌ ನೀಡಿದರು, ಆಗಾಗ ಪ್ರವಾಸ ಮಾಡುತ್ತಾ ಅಲ್ಲಿಯ ಪೋಟೋಗಳನ್ನು ಶೇರ್‌ ಮಾಡುವುದರ ಮೂಲಕ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link