ಸೋಭಿತಾ ಧೂಳಿಪಾಲ ಜೊತೆ ಮದುವೆ ಬೆನ್ನಲ್ಲೆ ಸಮಂತಾ-ನಾಗಚೈತನ್ಯ ವಕೇಶನ್ ಫೋಟೋಸ್ ವೈರಲ್!!
Samantha Naga Chaitanya: ನಟ ನಾಗಚೈತನ್ಯ ಹಾಗೂ ಸಮಂತಾ ಅವರು ವಿಚ್ಚೇದನ ಪಡೆದು ಹಲವು ದಿನಗಳೆ ಕಳೆದಿವೆ, ಇನ್ನೇನು ಕೆಲವೇ ದಿನಗಳಲ್ಲಿ ನಾಗಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಅವರ ಮದುವೆ ನಡೆಯಲಿದೆ, ಈ ಮಧ್ಯೆ ಸಮಂತಾ ಹಾಗೂ ನಾಗಚೈತನ್ಯ ಅವರ ಹಳೆಯ ಫೋಟೋಗಳು ವೈರಲ್ ಆಗುತ್ತಿದೆ.
ಸಮಂತಾ ಹಾಗೂ ನಾಗಚೈತನ್ಯ ಜೋಡಿ 2017ರಲ್ಲಿ ನಾಗಚೈತನ್ಯ ಜೋಡಿ ಪ್ರೀತಿಸಿ ಮದುವೆಯಾಗಿದ್ದರು.
ಸಿನಿಮಾ ಒಂದರ ಶೂಟಿಂಗ್ ಸಮಯದಲ್ಲಿ ಶುರುವಾಗಿದ್ದ ಇವರ ಪರಿಚಯ, ನಂತರ ಪ್ರೀತಿಗೆ ತಿರುಗಿತ್ತು. ಪ್ರೀತಿ ಪ್ರೇಮಕ್ಕೆ ತಿರುಗಿ, ಜೋಡಿ ಮನೆಯವರನ್ನು ಒಪ್ಪಿಸಿ ಮದುವೆ ಕೂಡ ಆಗಿದ್ದರು.
ಈ ಜೋಡಿಯ ಮದುವೆ ಕುರಿತು ಇಡೀ ಇಂಡಸ್ಟ್ರಿಯೇ ಮಾತನಾಡಿಕೊಂಡಿತ್ತು. ಸಿನಿಮಾ ಸೆಲೆಬಿಟಿಗಳು ಈ ಜೋಡಿಯ ಮದುವೆಗೆ ಹಾಜರ್ ಆಗಿದ್ದರು.
ನಾಗಚೈತನ್ಯ ಹಾಗೂ ಸಮಂತಾ ಜೋಡಿ ಹಿಂದೂ ಹಾಗೂ ಕ್ರೈಸ್ತ ಧರ್ಮದ ಸಂಪ್ರದಾಯದಂತೆ ಪರಸ್ಪರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು, ಸುಂದರವಾದ ಜೀವನ ಸಾಗಿಸುತ್ತಿದ್ದರು, ಆದರೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಏನೋ, ಈ ಜೋಡಿ ದಢೀರನೆ ವಿಚ್ಛೇದನ ಘೋಷಿಸಿ ದೂರವಾಗಿದ್ದರು.
ಈ ಸುದ್ದಿ ಸಿನಿಮಾ ಇಂಡಸ್ಟ್ರಿಗೆ ಅಲ್ಲದೆ ಅಭಿಮಾನಿಗಳಿಗೂ ಫುಲ್ ಶಾಕ್ ಕೊಟ್ಟಿತ್ತು. ಇದೀಗ ನಾಗಚೈತನ್ಯ ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ಮದುವೆಯಾಗಲು ಸಜ್ಜಾಗಿದ್ದರೆ, ಮತ್ತೊಂದೆಡೆ ಸಮಂತಾ ಒಂಟಿಯಾಗಿ ಕಾಲ ಕಳೆಯುತ್ತಿದ್ದಾರೆ.
ಇನ್ನೇನು ಕೆಲವೇ ದಿನದಲ್ಲಿ ನಾಗಚೈತನ್ಯ ಅವರು ಸೋಭಿತಾ ಧೂಳಿಪಾಲ ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ಈಗಿರುವಾಗ ನಾಗಚೈತನ್ಯ ಅವರು ಸಮಂತಾ ಅಔರೊಂದಿಗೆ ವಕೇಶನ್‌ನಲ್ಲಿರುವ ಫೋಟೋಗಳು ವೈರಲ್ ಆಗುತ್ತಿವೆ.
ವೈರಲ್ ಆಗುತ್ತಿರುವ ಫೋಟೋಗಳು ಹಳೆಯದ್ದಾಗಿದ್ದು, ಫೋಟೋಗಳನ್ನು ನೋಡಿ ಅಭಿಮಾನಿಗಳು ಮತ್ತೊಮ್ಮೆ ತಮ್ಮ ನೆಚ್ಚಿನ ಜೋಡಿ ಒಂದಾಗಬಾರದೆ ಎಂದು ಪ್ರಾರ್ಥಿಸುತ್ತಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಜೋಡಿಯನ್ನು ಮತ್ತೊಮ್ಮೆ ಕಣ್ತುಂಬಿಕೊಂಡಿದ್ದಾರೆ.