ʻನಾನು ಸತ್ಯವನ್ನು ಹೊರತರಲು ಬಯಸಿದ್ದೆ, ಆದರೆ...ʼ ನಾಗಚೈತನ್ಯ ಅವರೊಂದಿಗಿನ ವಿಚ್ಛೇದನದ ಕುರಿತು ಕೊನೆಗೂ ಮೌನ ಮುರಿದ ಸಮಂತಾ..!

Tue, 26 Nov 2024-12:46 pm,

Samantha Ruth Prabhu: ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಜೋಡಿ ಸಿನಿಮಾ ಇಂಡಸ್ಟ್ರಿಯ ಪವರ್‌ ಕಪಲ್‌ ಎಂದೆ ಗುರುತಿಸಲ್ಪಟ್ಟಿದ್ದರು. ಆದರೆ 2021 ರಲ್ಲಿ ಇಬ್ಬರೂ ವಿಚ್ಛೇದನ ಪಡೆಯುವ ಮೂಲಕ ತಮ್ಮ ದಿಕ್ಕನ್ನು ಬದಲಾಯಿಸಿ ಬಿಟ್ಟರು.   

ಆದರೆ, ವಿಚ್ಛೇದನವಾದ ದಿನದಿಂದಲೂ ಈ ಜೋಡಿ ತಮ್ಮ ವಿಚ್ಛೇದನ ಕಾರಣದ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ, ಇದರ ಹಿಂದಿನ ಕಾರಣವನ್ನೂ ಕೂಡ ಬಿಚಿಟ್ಟಿಲ್ಲ.  

ಕಟುವಾದ ಟೀಕೆಗಳು ಮತ್ತು ಲೆಕ್ಕವಿಲ್ಲದಷ್ಟು ವದಂತಿಗಳನ್ನು ಎದುರಿಸುತ್ತಿದ್ದರೂ, ಸಮಂತಾ ಸುಳ್ಳನ್ನು ಎದುರಿಸುವ ಬದಲು ಮೌನವಾಗಿರಲು ನಿರ್ಧರಿಸಿದರು.   

ನಾಗ ಚೈತನ್ಯ ಈಗ ತಮ್ಮ ಜೀವನದಲ್ಲಿ ಮುಂದೆ ಸಾಗಿದ್ದಾರೆ. ಡಿಸೆಂಬರ್ 4 ರಂದು ಅವರು ತಮ್ಮ ಲೇಡಿ ಲವ್ ಶೋಭಿತಾ ಧೂಳಿಪಾಳ ಅವರನ್ನು ವಿವಾಹವಾಗಲಿದ್ದಾರೆ. ಈಗ ಈ ಬಗ್ಗೆ ಸಮಂತಾ ರೂತ್ ಪ್ರಭು ಮಾತನಾಡಿದ್ದಾರೆ.  

ದುರದೃಷ್ಟವಶಾತ್, ನಾವು ಪುರುಷಪ್ರಧಾನ ಸಮಾಜದಲ್ಲಿ ಬದುಕುತ್ತಿದ್ದೇವೆ, ನಾವು ತಪ್ಪು ಮಾಡಿಲ್ಲ ಅಂದರೂ ಹೆಣ್ಣು ಮಕ್ಕಳನ್ನು ಜನ ನಿಂದಿಸುತ್ತಾರೆ, ಅವರದ್ದೆ ತಪ್ಪು, ಅವರೇ ಏನೂ ತಪ್ಪು ಮಾಡಿರಬೇಕು ಎಂದು ಜನರು ಬಾವಿಸುತ್ತಾರೆ. ಇದು ನಾಚಿಕೆಗೇಡಿನ ಸಂಗತಿ"   

"ವಿಚ್ಛೇದನದ ಸಮಯದಲ್ಲಿಯೂ ಸಹ ತನ್ನ ಬಗ್ಗೆ ಅನೇಕ ಸುಳ್ಳು ಸುದ್ದಿಗಳು ಹರಿದಾಡಿದ್ದವು, ಆದರೆ ನನ್ನ ಸ್ನೇಹಿತರಿಗೆ ಹಾಗೂ ನನ್ನನ್ನು ಹತ್ತಿರದಿಂದ ಇದ್ದು ಅರಿತವರಿಗೆ ನನ್ನ ಕುರಿತಾದ ಎಲ್ಲ ಸತ್ಯಗಳು ಗೊತ್ತಿತ್ತು, ಇದರಿಂದಾಗಿ ನಾನು ಏನೂ ಮಾತನಾಡದೆ ಸುಮ್ಮನಿದ್ದೆ"  

"ನಾನು ನನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದೇನೆ. ಪರಿಸ್ಥಿತಿ ತೀರಾ ಹದಗೆಟ್ಟಾಗ ಮತ್ತು ಎಲ್ಲೆಂದರಲ್ಲಿ ಸುಳ್ಳುಗಳನ್ನು ಹರಡಿದಾಗ, ನಾನು ನನ್ನೊಂದಿಗೆ ಮಾತನಾಡಿದೆ. ನಾನು ಸತ್ಯವನ್ನು ಬಹಿರಂಗಪಡಿಸಲು ಮತ್ತು ಇದೆಲ್ಲ ತಪ್ಪು ಎಂದು ಹೇಳಬೇಕೆಂದು ಅನೇಕ ಬಾರಿ ಯೋಚಿಸಿದೆ. ನನ್ನ ಮನೆಯವರಿಗೆ, ನನ್ನ ಗೆಳೆಯರಿಗೆ ನನ್ನ ಸತ್ಯ ಗೊತ್ತಿದ್ದು ಸಾಕು ಅನ್ನಿಸಿತು. ನಾನು ಎಲ್ಲರಿಗೂ ನನ್ನನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಎಂಬ ಕಾರಣಕ್ಕೆ ಸುಮ್ಮನಿದ್ದೆ"  

"ನನ್ನನ್ನು ಎಲ್ಲರೂ ಪ್ರೀತಿಸಬೇಕು, ಎಲ್ಲರು ನನ್ನ ಜೊತೆ ಇರಬೇಕು ಎಂಬುದು ನನ್ನ ಆಸೆ, ನಾನು ಸತ್ಯ ಹೇಳುವುದರಿಂದ ಇದೀಗ ಯಾರು ನನ್ನನ್ನು ಇಷ್ಟ ಪಡುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ, ನನ್ನನ್ನು ಪ್ರೀತಿಸುವವರು ನನ್ನನ್ನು ನಂಬುತ್ತಾರೆ, ಇನ್ನೂ ನನ್ನನ್ನು ಯಾರು ನಂಬುತ್ತಾರೆ, ಏನನ್ನು ನಂಬುತ್ತಾರೆ, ಎನ್ನುವುದು ಅವರವರ ವಿವೇಚನೆಗೆ ಬಿಟ್ಟಿದೆ" ಎಂದಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link