ಸಮಂತಾ ಫಸ್ಟ್ ಲವ್ ನಾಗ ಚೈತನ್ಯ ಅಲ್ಲ! ಸ್ಯಾಮ್ ಮೊದಲು ಪ್ರೀತಿಸಿದ್ದ ಈ ಖ್ಯಾತ ನಟ ಇನ್ನೂ ಮದುವೆನೇ ಆಗಿಲ್ಲ..

Wed, 14 Aug 2024-8:17 am,

ಸಮಂತಾ ನಾಗ ಚೈತನ್ಯ ಇಬ್ಬರೂ ಪ್ರೀತಿಸಿ ಮದುವೆಯಾದವರು. ಆದರೆ ಸಮಂತಾ ಫಸ್ಟ್ ಲವ್ ನಾಗ ಚೈತನ್ಯ ಅಲ್ಲ ಎನ್ನಲಾಗುತ್ತದೆ. ಸಮಂತಾ ಸೌತ್​​ ನಟನ ಜೊತೆ ಡೇಟಿಂಗ್‌ ಮಾಡಿದ್ದರು ಎನ್ನಲಾಗುತ್ತದೆ. 

ನಾಗ ಚೈತನ್ಯ ಜೊತೆ ಮದುವೆಗೂ ಮುನ್ನ ಸಮಂತಾ ಹೆಸರು ಸಿದ್ಧಾರ್ಥ್ ಜೊತೆ ತಳಕು ಹಾಖಿಕೊಂಡಿತ್ತು. ಕಾಲಿವುಡ್ ನಟ ಸಿದ್ಧಾರ್ಥ್ ಸಮಂತಾ ಪರಸ್ಪ ಪ್ರೀತಿಸುತ್ತಿದ್ದರು ಎಂಬ ವದಂತಿ ಇತ್ತು.

ಸಿದ್ದಾರ್ಥ್ ಜೊತೆ ಸಮಂತಾ ಸುತ್ತಾಡುತ್ತಿದ್ದರು ಎಂಬ ಅನುಮಾನವಿದೆ ಎನ್ನಲಾಗಿತ್ತು. ಈ ಜೋಡಿ ಪಕ್ಕಾ ಮದುವೆಯಾಗುತ್ತಾರೆ ಎನ್ನಲಾಗಿತ್ತು. 

ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಅನೌನ್ಸ್ ಮಾಡಿದಾಗ ಕೂಡ ನಟ ಸಿದ್ಧಾರ್ಥ್ ಅವರು ಚೀಟರ್ಸ್ ಎಂದು ಮಾಡಿದ್ದ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 

ಸಮಂತಾ ಅವರು ನಾಗ ಚೈತನ್ಯ ಅವರನ್ನು ಪ್ರೀತಿಸುವ ಮೊದಲು ಸಿದ್ಧಾರ್ಥ್‌ ಅವರನ್ನು ಪ್ರೀತಿಸಿದ್ದರು ಎಂಬ ವದಂತಿ ಇತ್ತು. ಆದರೆ ಇವರ ಸಂಬಂಧ ಅರ್ಧಕ್ಕೆ ಮುರಿದು ಬಿತ್ತು ಎನ್ನಲಾಗುತ್ತದೆ. 

ಸಮಂತಾ ಹಾಗೂ ಸಿದ್ಧಾರ್ಥ್ ಒಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೀಯ ವೆಲೈ ಸೆಯ್ಯುಂ ಕುಮರು, ಜಬರ್ದಸ್ತ್ ಹಾಗೂ ಡುಂ ಡುಂ ಪಿ ಪಿ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು.  

ಸಮಂತಾ ಜೊತೆ ಪ್ರೀತಿಯ ವದಂತಿಯಲ್ಲಿದ್ದ ನಟ ಸಿದ್ಧಾರ್ಥ್ ಇಂದಿಗೂ ಬ್ಯಾಚುರಲ್ ಆಗಿದ್ದಾರೆ.  ಸಿದ್ಧಾರ್ಥ್ ಇನ್ನೂ ಮದುವೆಯಾಗಿಲ್ಲ. ಇತ್ತೀಚೆಗೆ ಬಾಲಿವು ನಟಿ ಅದಿತಿ ರಾವ್ ಹೈದರಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರವೇ ಮದುವೆಯಾಗುವ ಸಾಧ್ಯತೆ ಇದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link