1 ನಿಮಿಷಕ್ಕೆ 1 ಕೋಟಿ ಸಂಭಾವನೆ.. ಭಾರತದ ಅತ್ಯಂತ ದುಬಾರಿ ಡ್ಯಾನ್ಸರ್ ಈ ಸೌತ್ ನಟಿ !!
ಹಲವು ಬಾರಿ ಸಿನಿಮಾ ಫ್ಲಾಪ್ ಆದರೂ ಐಟಂ ಸಾಂಗ್ ಹಿಟ್ ಆಗಿದ್ದಿದೆ. ಕಳೆದ ಕೆಲ ವರ್ಷಗಳಲ್ಲಿ ಐಟಂ ಡ್ಯಾನ್ಸ್ ಸಿನಿಮಾದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ.
ಟಾಪ್ ನಟಿಯರೂ ಐಟಂ ಸಾಂಗ್ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸ್ಟಾರ್ ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ.
ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರದ ‘ಹೂ ಅಂತೀಯಾ ಮಾವ..’ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈಗಲೂ ಇದು ಜನರ ಫೆವರೇಟ್ ಹಾಡುಗಳಲ್ಲಿ ಒಂದು.
ಈ ಹಾಡಿಗಾಗಿ ತೆಲುಗು ಸ್ಟಾರ್ ನಟಿ ಸಮಂತಾ ಸೊಂಟ ಬಳುಕಿಸಿದ್ದರು.
ಇಡೀ ಸಿನಿಮಾದಲ್ಲಿ ಐದು ನಿಮಿಷ ಕಾಣಿಸಿಕೊಂಡ ಸಮಂತಾ ಪಡೆದಿದ್ದು 5 ಕೋಟಿ ರೂಪಾಯಿ ಸಂಭಾವನೆ ಎನ್ನಲಾಗಿದೆ.
ಇದು ಸಮಂತಾ ವೃತ್ತಿಜೀವನದ ಮೊದಲ ಐಟಂ ಸಾಂಗ್. ಹಾಡು, ಡ್ಯಾನ್ಸ್ ಎಲ್ಲವೂ ಸೂಪರ್ ಹಿಟ್ ಆಯಿತು.