ನಾಗ ಚೈತನ್ಯ- ಶೋಭಿತಾ ಮದುವೆ ಕುರಿತು ಸಮಂತಾ ಮೊದಲ ಪ್ರತಿಕ್ರಯೆ..! ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್
)
Samantha viral post: ತಮ್ಮ ಮಾಜಿ ಪತಿ ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲ ಅವರ ವಿವಾಹಕ್ಕೂ ಮುನ್ನ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕವನವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
)
ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ಸಮಂತಾ ರುತ್ ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ.
)
ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಅಪ್‌ಡೇಟ್‌ಗಳನ್ನು ನೀಡುವುದರ ಜೊತೆಗೆ, ಸಮಂತಾ ಸಾಕಷ್ಟು ವಿಷಯಗಳನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
ಆದರೆ, ಇದೀಗ ಎಲ್ಲೆಡೆ ಸಮಂತಾ ಅವರ ಮಾಜಿ ಪತಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಮದುವೆ ಕುರಿತಾದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಡಿಸೆಂಬರ್ ತಿಂಗಳಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ನಡೆಯಲಿದ್ದು, ಇದರ ಬೆನ್ನಲ್ಲೆ ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ರುಡ್ಯಾರ್ಡ್ ಕಿಪ್ಲಿಂಗ್ ಬರೆದ ಪ್ರಸಿದ್ಧ ಇಂಗ್ಲಿಷ್ ಕವಿತೆಯನ್ನು ನಟಿ ಸಮಂತಾ ಇದೀಗ ಹಂಚಿಕೊಂಡಿದ್ದು, ಕಷ್ಟದ ಸಮಯದಲ್ಲಿ ಈ ಕವಿತೆ ತನಗೆ ಮಾರ್ಗದರ್ಶನ ನೀಡುತ್ತದೆ ಎಂದು ನಟಿ ಸಮಂತಾ ಬರೆದುಕೊಂಡಿದ್ದಾರೆ.
ಈ ಕವಿತೆ ಯಾವಾಗಲೂ ಅವರಿಗೆ ದಾರಿದೀಪವಾಗಿದೆ, ಅದಕ್ಕಾಗಿಯೇ ನಾನು ಅದನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಶೀರ್ಷಿಕೆ ಬರೆಯುವ ಮೂಲಕ ಸಮಂತಾ ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತನದಲ್ಲಿ ಹಂಚಿಕೊಂಡಿದ್ದಾರೆ.
ಅವ್ಯವಸ್ಥೆಯ ನಡುವೆಯೂ ಶಾಂತವಾಗಿ ಉಳಿಯುವ ಶಕ್ತಿಯನ್ನು ಪಡೆಯುವುದು ಹೇಗೆ ಶಕ್ತಿಯನ್ನು ಕಾಪಾಡಿಕೊಳ್ಳುವುದು, ತರ್ಕಬದ್ಧ ಚಿಂತನೆ .. ಅಂದರೆ ನಿಮ್ಮ ಸುತ್ತಲಿರುವ ವಿಷಯದ ಮೇಲೆ ನೀವು ನಿಯಂತ್ರಣ ಅಥವಾ ಸ್ಥೈರ್ಯವನ್ನು ಕಳೆದುಕೊಳ್ಳುವುದಿಲ್ಲ ಎಂದು ಈ ಕವನ ಸಾರಿ ಹೇಳುತ್ತದೆ.
ಈ ಕವಿತೆ ತಾಳ್ಮೆಯ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ, ಒತ್ತಡದಲ್ಲಿ ಶಾಂತವಾಗಿರುವುದು ಮತ್ತು ಪ್ರಾಮಾಣಿಕವಾಗಿರುವುದು. ಗೆಲುವುಗಳನ್ನು ಸಮಾನವಾಗಿ ಕಾಣಲು ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಪ್ರೋತ್ಸಾಹಿಸುತ್ತದೆ ಎಂದು ಸಮಂತಾ ಅವರು ಬರೆದುಕೊಂಡಿರುವ ಈ ಪೋಸ್ಟ್ ಸದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಅದರಲ್ಲೂ, ಚೈತು ಮತ್ತು ಶೋಭಿತಾ ತಮ್ಮ ಮದುವೆಗೂ ಮುನ್ನ ಈ ವಿಷಯವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸದ್ಯ ಸಮಂತಾ ಹಂಚಿಕೊಂಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಹಾಟ್ ಟಾಪಿಕ್ ಆಗಿದೆ.