ಸಮಂತಾ ಮುಖದಲ್ಲಿ ಮತ್ತೆ ಚಿಗುರಿತು ಮಂದಹಾಸ..! ನಟಿಯ ಹೃದಯ ಕದ್ದ ಪೋರ ಯಾರು ಗೊತ್ತಾ..?
samantha post: ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನ ಪಡೆದು ಹಲವು ದಿನಗಳು ಕಳೆದಿದೆ, ನಾಗಚೈತನ್ಯ ಇದೀಗ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಚ್ಛಿತಾರ್ಥವನ್ನು ಸಹ ಮಾಡಿಕೊಂಡಿದ್ದಾರೆ. ಹೀಗಿರುವಾಗ ಸಮಂತಾ ಇತ್ತೀಚೆಗೆ ಮಾಡಿರುವ ಒಂದು ಪೋಸ್ಟ್ ಫಿಲಿಂ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದ್ದು, ಈ ಪೋಸ್ಟ್ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಮಂತಾ ಜೀವನ ತೆರೆದ ಪುಸ್ತಕವಿದ್ದಂತೆ, ನಟಿಯ ಕುರಿತಾದ ಯಾವುದೇ ವಿಷಯ ಇರಲಿ, ಅದು ಸಿಕ್ಕಾಪಟ್ಟೆ ಬೇಗ ವೈರಲ್ ಆಗುತ್ತದೆ.
2017 ರಲ್ಲಿ ತೆಲುಗಿನ ಟಾಪ್ ಹೀರೋಯಿನ್ ಸಮಂತಾ, ನಾಯಕ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ಈ ಜೋಡಿ ಅಕ್ಟೋಬರ್ 2021 ರಲ್ಲಿ ವಿಚ್ಚೇಧನವನ್ನು ಪಡೆದುಕೊಂಡಿದ್ದರು.
ವಿಚ್ಚೇದನ ಪಡೆದ ನಂತರ ನಟಿ ಸಮಂತಾ ಒಂಟಿ ಜೀವನ ನಡೆಸುತ್ತಿದ್ದಾರೆ. ಇನ್ನೊಂದೆಡೆ ನಾಗಚೈತನ್ಯ ನಟಿ ಸೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಏತನ್ಮಧ್ಯೆ, ಸಮಂತಾ ಬಾಲಿವುಡ್ ನಿರ್ದೇಶಕರ ಜೊತೆ ಪ್ರೀತಿಯಲ್ಲಿದ್ದಾರೆ, ಶೀಘ್ರದಲ್ಲೇ ಅವರನ್ನು ನಟಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.
ನಟಿ ಸಮಂತಾ ಯಾವುದಾದರು ನಟನೊಂದಿಗೆ ಫೋಟೋಗೆ ಪೋಸ್ ಕೊಟ್ರೇನೆ ಅವರ ಜೊತೆ ನಟಿ ಸಮಂತಾ ಅವರು ಮದುವೆಯಾಗಲಿದ್ದಾರೆ ಎಂದು ಸುದ್ದಿಯನ್ನು ಹಬ್ಬಿಸುತ್ತಿರುವ ಈ ಸಂದರ್ಭದಲ್ಲಿ ನಟಿ ಸಮಂತಾ, ಬಾಲಿವುಡ್ ನಟನೊಂದಿಗೆ ಇತ್ತೀಚೆಗೆ ಸಖತ್ ಕ್ಲೋಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ನಟಿ ಸಮಂತಾ ಈ ಬಾಲಿವುಡ್ ನಟನೊಂದಿಗೆ ಹಲವಾರು ಭಾರಿ ಇತ್ತೀಚೆಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಲು ಕ್ಯೂಟ್ ಪೇರ್ ಎಂದು ಕಾಮೆಂಟ್ ಮಟುತ್ತಿದ್ದಾರೆ.
ಆದರೆ, ಈ ಎಲ್ಲಾ ಫೋಟೋಗಳ ಹಿಂದಿನ ಅಸಲಿ ಸತ್ಯ ಏನು ಅಂದರೆ, ನಟಿ ಸಮಂತಾ ಅವರ ಬಾಲಿವುಡ್ ನಟ ವರುಣ್ ಧವನ್ ಅವರೊಂದಿಗೆ ಒಂದು ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಸಿನಿಮಾದ ಪ್ರಚಾರ ಕೂಡ ಅದ್ದೂರಿಯಾಗಿ ಜರುಗುತ್ತಿದ್ದು, ನಟಿ ಸಮಂತಾ ಇದೇ ಕಾರ್ಯಕ್ರಮಕ್ಕಾಗಿ ಇತ್ತೀಚೆಗೆ ನಟನೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ಬಾಲಿವುಡ್ ನಟನೊಂದಿಗಿನ ಸಮಂತಾ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕ್ಯೂಟ್ ಪೇರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.