Samantha: `ಶಾಕುಂತಲಂ` ಚಿತ್ರಕ್ಕಾಗಿ 30kg ಸೀರೆ, 90 ಕೋಟಿಯ ಆಭರಣ.! ಸಮಂತಾ ಫೋಟೋಸ್ ವೈರಲ್
ತೆಲುಗು ಆಕ್ಷನ್-ಥ್ರಿಲ್ಲರ್ ಯಶೋದಾ ಸಿನಿಮಾ ಬಳಿಕ ಸಮಂತಾ ರೂತ್ ಪ್ರಭು ಪೌರಾಣಿಕ ನಾಟಕ ಶಾಕುಂತಲಂ ಬಿಡುಗಡೆಗೆ ಸಿನಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಸಮಂತಾ ದುಷ್ಯಂತನ ಪತ್ನಿ ಶಕುಂತಲಾ ಮತ್ತು ಚಕ್ರವರ್ತಿ ಭರತನ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಮಂತಾ ತನ್ನ ಪಾತ್ರಕ್ಕೆ ಪರಿಪೂರ್ಣತೆಯನ್ನು ತರಲು ಸಾಕಷ್ಟು ಶ್ರಮವಹಿಸಿದ್ದಾರೆ. ಶಾಕುಂತಲಂ ಸಿನಿಮಾದಲ್ಲಿ ಸಮಂತಾ ಧರಿಸಿರುವ ಸೀರೆ ಮತ್ತು ಒಡವೆ ಬೆಲೆ ಹಾಗೂ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ಹೈದರಾಬಾದ್ ಮೂಲದ ವಸುಂಧರಾ ಡೈಮಂಡ್ ರೂಫ್ ಈ ಆಭರಣಗಳನ್ನು ವಿನ್ಯಾಸಗೊಳಿಸಿದೆ. ಸಮಂತಾ 93 ಕೋಟಿ ರೂಪಾಯಿ ಬೆಲೆಯ ಆಭರಣ ಧರಿಸಿದ್ದಾರೆ. ಅಲ್ಲದೇ 30 ಕೆಜಿ ತೂಕದ ಸೀರೆ ತೊಟ್ಟು 7 ದಿನಗಳ ಕಾಲ ಶೂಟಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.