ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದ ಸಮಂತಾ! ನಟಿಯ ಪೋಸ್ಟ್ ಕಂಡು ಫ್ಯಾನ್ಸ್ ಫುಲ್ ಕುಷ್
Samantha: ಟಾಲಿವುಡ್ ನಟಿ ಸಮಂತಾ ತಮ್ಮ ಅಭಿಮಾನಿಗಳಿಗೆ ಸೂಪರ್ ಟ್ರೀಟ್ ನೀಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಸಮಂತ ಅವರು ಹಂಚಿಕೊಂಡಿರುವ ಪೋಸ್ಟ್ ಇದೀಗ ಭಾರಿ ವೈರಲ್ ಆಗುತ್ತಿದ್ದು, ನಟಿಯ ಪೋಸ್ಟ್ ಕಂಡು ಫ್ಯಾನ್ಸ್ ಫುಲ್ ಕುಷ್ ಆಗಿದ್ದಾರೆ.
ನಟಿ ಸಮಂತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲೇನಿದೆ ವಿಶೇಷ ಅಂತೀರ? ಇಷ್ಟು ದಿನ ನಟಿ ಕಾಯಿಲೆಯಿಂದ ಬಳಲುತ್ತಿದ್ದ ವಿಷಯ ಗೊತ್ತೇ ಇದೆ, ಇದೀಗ ನಟಿ ಈ ಕುರಿತು ಅಷ್ಟೆ ಅಲ್ಲದೆ ತಮ್ಮ ಫೋಟೋಗಳ ಜೊತೆ ಮತ್ತೊಂದು ವಿಷಯ ಶೇರ್ ಮಾಡಿಕೊಂಡಿದ್ದು, ಇದನ್ನು ನೋಡಿದ ನಟಿಯ ಅಭಿಮಾನಿಗಳು ಫುಲ್ ಕುಷ್ ಆಗಿದ್ದಾರೆ.
ನಟಿ ಸಮಂತಾ ನಟ ನಾಗಚೈತನ್ಯ ಅವರೊಂದಿಗಿನ ವಿಚ್ಛೇದನದ ನಂತರ ಹಲವು ಆರೋಗ್ಯ ಸಮಸ್ಯಗಳನ್ನು ಎದುರಿಸಿದ್ದರು, ಈ ನಡುವೆ ನಟಿ ತಮ್ಮ ಆರೋಗ್ಯ ಸಮಸ್ಯೆಯಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಇನ್ನೂ ನಾಗಚೈತನ್ಯ ತಮ್ಮ ಗೆಳತಿ ಸೋಭಿತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಟಿ ಸಮಂತಾ ಮಾತ್ರ ಒಂಟಿಯಾಗಿ ಕಾಲ ಕಳೆಯುತ್ತಾ, ತಮ್ಮ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಟ ನಡೆಸುತ್ತಿದ್ದಾರೆ.
ಹೀಗೆ ನಟಿ ಸಮಂತಾ ಕೊರಗುತ್ತಿರುವುದನ್ನು ನೋಡಿ ಅಭಿಮಾನಿಗಳು ಕೂಡ ಮೂ ಆನ್ ಎಂದು ಹೇಳುತ್ತಿದ್ದರೂ ಕೂಡ ನಟಿ ಮಾತ್ರ ಈ ಕುರಿತು ಇನ್ನೂ ಏನನ್ನೂ ಬದಲಿಸಿಕೊಂಡಂತೆ ಕಾಣಿಸಲಿಲ್ಲ, ಆದರೆ ದೀಗ ನಟಿ ಮಾಡಿರುವ ಅದೊಂದು ಪೋಸ್ಟ್ ನೋಡಿ ಅಭಿಮಾನಿಗಳು ಫುಲ್ ಕುಷಿಯಾಗಿದ್ದಾರೆ.
ಹೌದು, ನಟಿ ಸಮಂತಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸ್ಯಾಮ್ ಬ್ಯಾಕ್ ಟು ಫಾರ್ಮ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನಟಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದು ಅಷ್ಟೆ ಅಲ್ಲದೆ, ನಾನು ಈಗ ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಂಡಿದ್ದೇನೆ, ನನ್ನ ಆರೋಗ್ಯ ಚೆನ್ನಾಗಿದೆ, ಇದೀಗ ನಾನು ಇನ್ನೂ ಹೆಚ್ಚು ಗ್ಲಾಮೆರಸ್ ಆಗಿದ್ದೇನೆ ಎಂದು ನಟಿ ಸಮಂತಾ ಫೋಟೋದ ಶೀಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇದೀಗ ನಟಿಯ ಈ ಕಮ್‌ಬ್ಯಾಕ್ ಕಂಡು ಅಭಿಮಾನಿಗಳು ಫುಲ್ ಕುಷ್ ಆಗಿದ್ದಾರೆ.