New Samsung Smartphones Launched: Samsung Galaxy F12 ಹಾಗೂ Samsung Galaxy F02s ಮಾರುಕಟ್ಟೆಗೆ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mon, 05 Apr 2021-3:58 pm,

1. Samsung Latest News - Samsung Galaxy F12 ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ ರೂ.10,999 ಇದೆ. ಈ ಬೆಲೆಗೆ ನಿಮಗೆ 4 ಜಿಬಿ RAM ಹಾಗೂ 64GB ವೇರಿಯಂಟ್ ಸಿಗಲಿದೆ. ಇನ್ನೊಂದೆಡೆ ಈ ಫೋನ್ ನ 4GB RAM ಹಾಗೂ 128 GB ಸ್ಟೋರೇಜ್  ವೇರಿಯಂಟ್ ನ ಬೆಲೆ ರೂ.11,999 ನಿಗದಿಪಡಿಸಲಾಗಿದೆ.

2. Samsung Galaxy F02s ಸ್ಮಾರ್ಟ್ ಫೋನ್ ಬೆಲೆಯ ಕುರಿತು ಹೇಳುವುದಾದರೆ, ಈ ಫೋನ್ ನ ಆರಂಭಿಕ ಬೆಲೆ ರೂ.8,999 ನಿಗದಿಪಡಿಸಲಾಗಿದೆ. ಈ ಬೆಲೆಗೆ ನಿಮಗೆ 3GB RAM ಹಾಗೂ 32 GB ಆಂತರಿಕ ಮೆಮೊರಿಯ ಸ್ಮಾರ್ಟ್ ಫೋನ್ ಸಿಗಲಿದೆ. ಆದರೆ, ಇದರ 4GB RAM ಮತ್ತು 64GB ವೇರಿಯಂಟ್ ಬೆಲೆ ರೂ.9, 999 ನಿಗದಿಪಡಿಸಲಾಗಿದೆ. ಈ ಎರಡೂ ಸ್ಮಾರ್ಟ್ ಫೋನ್ ಗಳು ಫ್ಲಿಪ್ ಕಾರ್ಟ್, ಸ್ಯಾಮ್ಸಂಗ್ ಆನ್ಲೈನ್ ಸ್ಟೋರ್ ಹಾಗೂ ಆಯ್ದ ರಿಟೇಲ್ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿವೆ.

3. Samsung Galaxy F12 ವೈಶಿಷ್ಟ್ಯಗಳು ಇಂತಿವೆ - ಈ ಸ್ಮಾರ್ಟ್ ಫೋನ್ ಸೀ ಗ್ರೀನ್, ಸ್ಕೈಬ್ಲೂ, ಹಾಗೂ ಸೆಲೆಸ್ಟಲ್ ಬ್ಲಾಕ್ ಎಂಬ ಮೂರು ಕಲರ್ ಆಪ್ಸನ್ ನಲ್ಲಿ ಸಿಗುತ್ತಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 6.5 ಇಂಚಿನ HD+ ಇನ್ಫಿನಿಟಿ 5 ಡಿಸ್ಪ್ಲೇ ನೀಡಲಾಗಿದೆ. ಇದು Exynos 850 ಪ್ರಾಸೆಸ್ಸರ್ ಚಾಲಿತವಾಗಿದೆ, ಈ ಫೋನ್ ಹಿಂಭಾಗದಲ್ಲಿ 48 MP ಪ್ರೈಮರಿ ಕ್ಯಾಮರಾ ಜೊತೆಗೆ 5MP, 2MP, 2MP ಕ್ವಾಡ್ ಕ್ಯಾಮರಾ ಸೆಟಪ್ ನೀಡಲಾಗಿದೆ. ಸೇಲ್ಫಿ ಹಾಗೂ ವಿಡಿಯೋ ಕಾಲಿಂಗ್ ಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ.

4. Samsung Galaxy F02s ವೈಶಿಷ್ಟ್ಯಗಳು ಇಂತಿವೆ - ಈ ಸ್ಮಾರ್ಟ್ ಫೋನ್ ನಲ್ಲಿ ನಿಮಗೆ ಡೈಮಂಡ್ ಬ್ಲೂ, ಡೈಮಂಡ್ ವೈಟ್ ಹಾಗೂ ಡೈಮಂಡ್ ಬ್ಲಾಕ್ ಬಣ್ಣದ ಆಯ್ಕೆಗಳು ಇರಲಿವೆ. ಇದರಲ್ಲಿಯೂ ಕೂಡ ಉತ್ತಮ ವ್ಹಿವಿಂಗ್ ಗಾಗಿ 6.5 ಇಂಚಿನ HD+ ಡಿಸ್ಪ್ಲೇ ನೀಡಲಾಗಿದೆ.  ಈ ಫೋನ್ ಆಕ್ಟಾಕೋರ್ ಕ್ವಾಲ್ ಕಾಂ 450 ಒಳಗೊಂಡಿದೆ. ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇವು ಒಟ್ಟು 48MP, 5MP ಹಾಗೂ 2MP ಸಾಮರ್ಥ್ಯದ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಹಾಗೂ ವಿಡಿಯೋ ಕಾಲಿಂಗ್ ಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ನೀಡಲಾಗಿದೆ. 

5. ಬ್ಯಾಟರಿ ಸಾಮರ್ಥ್ಯ - Samsung Galaxy F12 ಸ್ಮಾರ್ಟ್ ಫೋನ್ ನಲ್ಲಿ 6000 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದರೆ, Samsung Galaxy F02sನಲ್ಲಿ 5000 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಮೊದಲ ಫೋನ್ ನಲ್ಲಿ 15W USB-C ಫಾಸ್ಟ್ ಜಾರ್ಜರ್ ನೀಡಲಾಗಿದ್ದರೆ, ಎರಡನೇ ಫೋನ್ ನಲ್ಲಿ 15W ಫಾಸ್ಟ್ ಚಾರ್ಜರ್ ನೀಡಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link