ಹೆಣ್ಣಿಗೆ ಸೀರೆಯಾಕೆ ಅಂದ ಅಂತ ಸಂಯುಕ್ತಾ ನೋಡಿದ್ರೆ ಗೊತ್ತಾಗುತ್ತೆ..! ಫೋಟೋಸ್‌ ನೋಡಿ

Wed, 04 Sep 2024-3:35 pm,

ನಾಯಕಿ ಸಂಯುಕ್ತಾ ಮೆನನ್ ಟಾಲಿವುಡ್ ಇಂಡಸ್ಟ್ರಿಯಲ್ಲಿ ಗೋಲ್ಡನ್ ಬ್ಯೂಟಿ ಎಂದು ಕರೆಯುತ್ತಾರೆ. ತೆಲುಗಿನಲ್ಲಿ ಸುಂದರಿ ನಟಿಸಿದ ಎಲ್ಲಾ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆದವು.  

ಸತತ ಯಶಸ್ಸಿನ ಮೂಲಕ ಕಡಿಮೆ ಅವಧಿಯಲ್ಲಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದ ಈ ಚೆಲುವೆ ಸದ್ಯ ಯಾವುದೇ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ.. ಅದಕ್ಕೆ ಕಾರಣವೂ ಗೊತ್ತಿಲ್ಲ..  

ಯಾವುದೇ ಆಫರ್‌ ಬಂದಿಲ್ವಾ..? ಅಥವಾ ಸಿನಿರಂಗವನ್ನ ಬಿಡುತ್ತಾರೆಯೇ..? ಎನ್ನುವ ಸಂದೇಹ ಸಂಯುಕ್ತಾ ಪ್ಯಾನ್ಸ್‌ ತಲೆಯನ್ನು ಕೊರೆಯುತ್ತಿದೆ.  

ಸಂಯುಕ್ತಾ ಕೊನೆಯದಾಗಿ ತೆಲುಗಿನಲ್ಲಿ ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ಡೆವಿಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ..  

ಈ ಸಿನಿಮಾದ ನಂತರ ಸಂಯುಕ್ತಾ ಟಾಲಿವುಡ್‌ನಲ್ಲಿ ಮತ್ತೊಂದು ಸಿನಿಮಾ ಮಾಡಲಿಲ್ಲ. ಆದರೆ ಮಲಯಾಳಂನಲ್ಲಿ ಸರಣಿ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.  

ಸೌತ್ ನಲ್ಲಿ ಒಳ್ಳೆ ಕಂಟೆಂಟ್ ಇರುವ ಸಿನಿಮಾಗಳ ಮೂಲಕ ತಮ್ಮ ಟ್ಯಾಲೆಂಟ್‌ ಸಾಬೀತು ಮಾಡಿರುವ ಈ ಚೆಲುವೆ ಈಗ ಬಾಲಿವುಡ್‌ನಲ್ಲಿ ಕಾಜೋಲ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.  

ಗಲಾಟಾ ಪ್ಲಸ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಸಂಯುಕ್ತಾ ತೆಲುಗು ಚಲನಚಿತ್ರಗಳ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ತೆಲುಗಿನಲ್ಲಿ ಸಿನಿಮಾ ಮಾಡುವುದು ತುಂಬಾ ಕಷ್ಟ ಅಂತ ಹೇಳಿದ್ದಾರೆ.  

ಇದರ ನಡುವೆ ಸಂಯುಕ್ತಾ ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ.. ಸುಂದರಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link