Actor Achyuth Kumar: ಕನ್ನಡದ ಖ್ಯಾತ ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತಾ? ಅವರೂ ಕೂಡ ಸಖತ್ ಫೇಮಸ್ ನಟಿ!!
ಕನ್ನಡದ ನಟ ಅಚ್ಯುತ್ ಕುಮಾರ್ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು.. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ರಂಗಭೂಮಿಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭ ಮಾಡಿದರು.. ಚಿಕ್ಕ ಪುಟ್ಟ ನಾಟಕದ ಪಾತ್ರಗಳನ್ನು ಮಾಡುತ್ತಿದ್ದ ಈ ನಟ ಸದ್ಯ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ..
ನಟ ಅಚ್ಯುತ್ ಕುಮಾರ್ ನಟಿಸಿದ ಬಹತೇಕ ಸಿನಿಮಾಗಳು ದೊಡ್ಡ ಯಶಸ್ಸನ್ನು ಪಡೆದುಕೊಂಡಿವೆ.. ಇತ್ತೀಚೆಗೆ ಬಿಡುಗಡೆಯಾದ ಯುವ ಸಿನಿಮಾದಲ್ಲಿಯೂ ನಟ ತಂದೆಯ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದರು..
ಅಚ್ಯುತ್ ಕುಮಾರ್ ಬರೀ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿಯೂ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ.. ಹೀಗಾಗಿಯೇ ಇವರು ಪ್ರತಿಯೊಬ್ಬರಿಗೂ ಚಿರಪರಿಚಿತ..
ಇನ್ನು ನಟ ಅಚ್ಯುತ್ ಕುಮಾರ್ ವೈಯಕ್ತಿಕ ವಿಚಾರಕ್ಕೆ ಬಂದರೇ ಇವರ ಪತ್ನಿ ಹೆಸರು ನಂದಿನಿ.. ಇವರೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..
ನಟ ಅಚ್ಯುತ್ ಕುಮಾರ್ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆಹಂಚಿಕೊಂಡಿದ್ದಲ್ಲದೇ ಯುವ ನಾಯಕರೊಂದಿಗೂ ತೆರೆಹಂಚಿಕೊಂಡು ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ..
ನಟ ಅಚ್ಯುತ್ ಕುಮಾರ್ ಕನ್ನಡ ಸಿನಿರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಲ್ಲದೇ.. ಸರಳತೆಗೆ ಮತ್ತೊಂದು ಹೆಸರು ಇವರೇ ಎನ್ನವಂತೆ ಬದುಕಿದ್ದಾರೆ.. ಕಾಮಿಡಿ ಪಾತ್ರವಿರಲಿ... ಪೋಷಕರ ಪಾತ್ರವಿರಲಿ ಮನಮುಟ್ಟುವಂತೆ ನಟಿಸಿ ಎಲ್ಲರ ಮನಗೆದ್ದ ಇವರು ಸರಳತೆಯ ಸರದಾರ ಎಂದರೇ ತಪ್ಪಾಗುವುದಿಲ್ಲ..
ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಅವರು ಇದ್ದರೇ ಸಾಕು ನಗು ಮತ್ತೇ ಫಿಲೀಂಗ್ಸ್‌ಗೆ ಕೊರತೆನೇ ಇರುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಇವರ ಕ್ರೇಜ್ ಹೆಚ್ಚಿಕೊಂಡಿದೆ..