ಪತಿ ಬಂಧನ ಬೆನ್ನಲ್ಲೇ ಮಹತ್ವದ ನಿರ್ಧಾರ: ದರ್ಶನ್‌ಗೆ ವಿಚ್ಛೇದನ ಕೊಡ್ತಾರಾ ಪತ್ನಿ ವಿಜಯಲಕ್ಷ್ಮಿ?
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹಲವೆಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.. ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ನಡೆ ಎಲ್ಲರಿಗು ಶಾಕ್ ನೀಡಿದೆ..
ಹೌದು ನಟ ದರ್ಶನ್ ಪತ್ನಿ ವಿಜಯ್‌ಲಕ್ಷ್ಮೀ ತಮ್ಮ ಪತಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗುತ್ತಿದ್ದಂತೆ ಇನ್‌ಸ್ಟಾಗ್ರಾಂನಿಂದ ದರ್ಶನ್ ಅವರನ್ನು ಅನ್‌ಪಾಲೋ ಮಾಡಿದ್ದರು.. ಇದರಿಂದ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದವು..
ಅಂದಹಾಗೇ ದರ್ಶನ್ ಪತ್ನಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅರೆಸ್ಟ್ ಆಗಿದ್ದರೂ ಇದರ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಪ್ರತಿಕ್ರಿಯೆ ಕೊಟ್ಟಿಲ್ಲ.. ನಟ ದರ್ಶನ್ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಅನ್‌ಪಾಲೋ ಮಾಡಿದ್ದ ವಿಜಯಲಕ್ಷ್ಮಿ ಸದ್ಯ ತಮ್ಮ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.. ಹೀಗಾಗಿ ವಿಜಯಲಕ್ಷ್ಮಿ ನಡೆ ಎಲ್ಲರಲ್ಲು ಕುತೂಹಲ ಕೆರಳಿಸಿದೆ..
ಹೌದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿದ್ದರು.. ಆಗ್ಗಾಗೆ ತಮ್ಮ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.. ಇದೀಗ ತಮ್ಮ ಖಾತೆಯನ್ನೇ ಡಿಲೀಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ..
ಹಾಗಾದ್ರೆ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿದ್ದು ಯಾಕೆ? ಅನ್ನೋದೆ ಸದ್ಯದ ಪ್ರಶ್ನೆ.. ಅವರು ಈ ರೀತಿ ಮಾಡುವ ಮೂಲಕ ದರ್ಶನ್ ಅವರಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರಾ? ಅಥವಾ ತಮ್ಮ ಪುತ್ರನ ಪೋಟೋಗಳು ಬಳಕೆಯಾಗದಿರಲಿ ಎಂದು ಹೀಗೆ ಮಾಡಿದ್ದಾರಾ.. ಸದ್ಯ ಇದೆಲ್ಲವೂ ರಹಸ್ಯವಾಗಿಯೇ ಉಳಿದಿದೆ..