ದೊಡ್ಮನೆ ಹಿರಿಮಗ ಶಿವರಾಜ್‌ಕುಮಾರ್... ಇವರ ಹೆಸರಲ್ಲಿರೋ ಒಟ್ಟು ಆಸ್ತಿ ಎಷ್ಟು ಗೊತ್ತಾ?
ಇತ್ತೀಚೆಗೆಯಷ್ಟೇ ಸುದ್ದಿ ಮನೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ನಟ ಡಾ.ಶಿವರಾಜ್ ಕುಮಾರ್ ಮಾತನಾಡಿ ತಮಗಿರುವ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ‘ನನಗೆ ಅನಾರೋಗ್ಯ ಇದೆ. ನಾನು ಸುಳ್ಳು ಹೇಳಲ್ಲ. ನಾನೂ ಕೂಡ ಮನುಷ್ಯನೇ. ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದರು
ಸಂದರ್ಶನದಲ್ಲಿ ಅಂದು ಮಾತನಾಡಿದ್ದ ಶಿವಣ್ಣ, "ಟ್ರೀಟ್ಮೆಂಟ್ಗೆ ನಾಲ್ಕು ಸೆಷನ್ ಇದೆ. ಈಗಾಗಲೇ ಎರಡು ಸೆಷನ್ ಮುಗಿದಿದ್ದು ಇನ್ನೆರಡು ಸೆಷನ್ ಮಾಡಬೇಕಿದೆ. ಒಂದು ಸರ್ಜರಿ ಇದೆ. ಅಮೆರಿಕದಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಎಂಬ ಬಗ್ಗೆ ಯೋಚನೆ ನಡೆಯುತ್ತಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ. ಜನವರಿಯಿಂದ ಫುಲ್ ಫಾರ್ಮ್ ಶಿವಣ್ಣ ಬರ್ತಾರೆ" ಎಂದು ಹೇಳಿದ್ದಾರೆ.
ಇನ್ನೊಂದೆಡೆ ಶಿವಣ್ಣ ಮತ್ತು ಅವರ ಪತ್ನಿಯ ಆಸ್ತಿ ವಿಚಾರವೂ ಮುನ್ನೆಲೆಗೆ ಬಂದಿದ್ದು, ಅಪಾರ ಸಂಪತ್ತಿನ ಒಡೆಯರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಿವಣ್ಣ ಪತ್ನಿ ಗೀತಾ ಶಿವ ರಾಜ್ಕುಮಾರ್ ಅವರು, ಶಿವಮೊಗ್ಗದಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಿದ್ದರು. ಆ ಸಂದರ್ಭದಲ್ಲಿ ದಂಪತಿಯ ಆಸ್ತಿ ವಿವರ ಬಹಿರಂಗವಾಗಿತ್ತು.
ವಯಸ್ಸು 62ರಲ್ಲೂ ಸಖತ್ ಹ್ಯಾಂಡ್‌ಸಂ ಆಗಿ ನಟಿಸುವ ಶಿವಣ್ಣ, ಪ್ರತಿ ಸಿನಿಮಾಗೂ ಕೋಟಿ ಕೋಟಿ ಸಂಭಾವನೆ ಪಡೆಯುವ ನಟ. ಅಂದಹಾಗೆ ಶಿವಣ್ಣನ ನಿಜವಾದ ಹೆಸರು ಎಂಎಸ್ ಪುಟ್ಟಸ್ವಾಮಿ. ಈ ಹೆಸರಿನಲ್ಲಿಯೇ ಆದಾಯದ ದಾಖಲೆಗಳನ್ನು ಕೂಡ ನೀಡಲಾಗಿದೆ.
ಶಿವರಾಜ್‌ಕುಮಾರ್ ಬಳಿ ಬ್ಯಾಂಕ್ ಬ್ಯಾಲೆನ್ಸ್ 4.82 ಕೋಟಿ ರೂಪಾಯಿ ಇದ್ದು, ಗೀತಾ ಅವರ ಬ್ಯಾಂಕ್ ಬ್ಯಾಲೆನ್ಸ್ 64 ಲಕ್ಷ ರೂಪಾಯಿ ಇದೆ. ಇನ್ನು ಶಿವಣ್ಣ ಬಳಿ 18 ಕೋಟಿ ರೂಪಾಯಿ ಹಾಗೂ ಗೀತಾ ಬಳಿ 5 ಕೋಟಿ ರೂಪಾಯಿ ಚರಾಸ್ತಿ ಇದೆ. ಸ್ಥಿರಾಸ್ತಿ ವಿಚಾರಕ್ಕೆ ಬಂದರೆ ಶಿವಣ್ಣ ಬಳಿ 31 ಕೋಟಿಯ ಸ್ಥಿರಾಸ್ತಿ ಇದ್ದರೆ ಗೀತಾ ಬಳಿ 34 ಕೋಟಿ ರೂಪಾಯಿ ಸ್ಥಿರಾಸ್ತಿ ಇದೆ.
2022-2023 ಆರ್ಥಿಕ ವರ್ಷದಲ್ಲಿ 2,97,27,100 ರೂಪಾಯಿ ಆದಾಯ ಹೊಂದಿದ್ದಾರೆ ಈ ದಂಪತಿ. ಗೀತಾ ಶಿವರಾಜ್ ಕುಮಾರ್ ಅವರು 1,48,63,750 ಕೋಟಿ ರೂಪಾಯಿ ಆದಾಯ ಹೊಂದಿದ್ದಾರೆ. ಶಿವಣ್ಣ ಬಳಿ 22,58,338 ರೂಪಾಯಿ ಕ್ಯಾಶ್ ಇದ್ದು, ಗೀತಾ ಶಿವರಾಜ್ ಕುಮಾರ್ ಬಳಿ 3 ಲಕ್ಷ ರೂಪಾಯಿ ಕ್ಯಾಶ್ ಇದೆ.
ಇದಷ್ಟೇ ಅಲ್ಲದೆ, ಶಿವಣ್ಣ ಹೆಸರಲ್ಲಿ ಸಾಲ ಕೂಡ ಇದ್ದು, 17 ಕೋಟಿ ರೂಪಾಯಿ ಸಾಲ ಬಾಕಿ ಇದೆ. ಇದರಲ್ಲಿ ಸಾಲ 3 ಕೋಟಿ ರೂಪಾಯಿ, ಅಡ್ವಾನ್ಸ್ 13.6 ಕೋಟಿ ರೂಪಾಯಿ.