ಬೆಂಗಳೂರಲ್ಲಿ 20 ಕೋಟಿ ಮನೆ... ಮುಂಬೈನಲ್ಲೂ ಇದೆ ಕೋಟಿ ಕೋಟಿ ಆಸ್ತಿ! ಕರುನಾಡ ʼಮಾಣಿಕ್ಯʼ ಕಿಚ್ಚ ಸುದೀಪ್ ಎಷ್ಟು ಕೋಟಿ ಆಸ್ತಿಗೆ ಒಡೆಯ ಗೊತ್ತಾ?
ಅಂದಹಾಗೆ ಸುದೀಪ್ ಕೇವಲ ನಟರಷ್ಟೇ ಅಲ್ಲ, ಉತ್ತಮ ನಿರ್ದೇಶಕ, ಗಾಯಕ, ನಿರ್ಮಾಪಕ, ನಿರೂಪಕ, ಇವೆಲ್ಲದರ ಜೊತೆ ಅದ್ಭುತ ಕ್ರಿಕೆಟಿಗ ಕೂಡ ಹೌದು. ಇನ್ನು ಇಷ್ಟೆಲ್ಲಾ ಪ್ರತಿಭೆಯನ್ನು ಹೊಂದಿರುವ ಸುದೀಪ್ ಅವರ ಆಸ್ತಿ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕಿಚ್ಚ ಸುದೀಪ್ ಅವರ ಒಟ್ಟು ಆಸ್ತಿ ಮೌಲ್ಯ 125 ಕೋಟಿ ರೂಪಾಯಿ. ಅವರ ಆದಾಯದ ಪ್ರಮುಖ ಮೂಲ ನಟನೆ, ರಿಯಾಲಿಟಿ ಶೋಗಳ ನಿರೂಪಣೆ, ನಿರ್ದೇಶನ ಮತ್ತು ಕಿಚ್ಚ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ.
ಇನ್ನು ಕಿಚ್ಚನಿಗೆ ಕಾರುಗಳ ಕ್ರೇಜ್ ಕೂಡ ಇದೆ. ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳ ಒಡೆಯನಾಗಿರುವ ಕಿಚ್ಚನ ಬಳಿ ರೇಂಜ್ ರೋವರ್ ವೋಗ್ಯ, ಜೀಪ್ ರಾಂಗ್ಲರ್, ಜೀಪ್ ಕಂಪಾಸ್, ಬಿಎಂಎಬ್ಲ್ಯೂ ಎಂ3, ಜಾಗ್ವಾರ್, ಹಮ್ಮರ್ ಹೆಚ್3, ಲ್ಯಾಂಬೋರ್ಗಿನಿ ಅವೆಂಟಾ ಡಾರ್, ವೋಲ್ವೋ ಕಾರುಗಳಿವೆ.
ಕಿಚ್ಚ ಜನಿಸಿದ್ದು ಶಿವಮೊಗ್ಗದಲ್ಲಿ. ಇವರ ಮನೆಯ ಹೆಸರು ಶ್ರೀನಿಧಿ. ಈ ಮನೆಯನ್ನು 1991ರಲ್ಲಿ ಸುದೀಪ್ ಅವರ ತಂದೆ ನಿರ್ಮಿಸಿದ್ದರು. ಕಿಚ್ಚ ಈಗಲೂ ಕೂಡ ಅದೇ ಮನೆಯಲ್ಲಿ ವಾಸವಿದ್ದು, ಇದು ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿದೆ. ಇನ್ನು ಇದರ ಮಾರುಕಟ್ಟೆ ಮೌಲ್ಯ 20 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಇದಷ್ಟೇ ಅಲ್ಲದೆ ಸುದೀಪ್ ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಪ್ರಾಪರ್ಟಿ ಹೊಂದಿದ್ದಾರೆ.
2023ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಕಿಚ್ಚ ಸುದೀಪ್ ಮೂರನೇ ಸ್ಥಾನದಲ್ಲಿದ್ದರು. ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಿನಿಮಾ ಮಾಡಿರುವ ಕಿಚ್ಚನಿಗೆ ಅವರ ಧ್ವನಿಯೇ ಪ್ಲಸ್ ಪಾಯಿಂಟ್. ಇನ್ನು 2023ರ ವರದಿಗಳ ಪ್ರಕಾರ ಕಿಚ್ಚ, ಪ್ರತಿ ಚಿತ್ರಕ್ಕೆ 20 ರಿಂದ 25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಇವೆಲ್ಲದರ ಜೊತೆಗೆ, ಸುದೀಪ್ ಅವರು ಹಲವು ಕಂಪನಿಗಳ ಜಾಹೀರಾತುಗಳನ್ನೂ ಸಹ ಮಾಡುತ್ತಾರೆ. ಈ ಜಾಹೀರಾತುಗಳಿಗೂ ಕೂಡ ದುಬಾರಿ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ ಎನ್ನಲಾಗುತ್ತದೆ.