Actor Ravishankar: ಖಡಕ್ ವಿಲನ್ ರವಿಶಂಕರ್ ಪತ್ನಿ ಯಾರು ಗೊತ್ತಾ? ಮಗನೂ ಸಖತ್ ಫೇಮಸ್!!
ಇದು ಆರುಮುಘ ಕೋಟೆ ಕನೋ.. ಕೆಂಪೇಗೌಡ ಸಿನಿಮಾದ ಈ ಡೈಲಾಗ್ ಯಾರಿಗೆ ಗೊತ್ತಿಲ್ಲ ಹೇಳಿ.. ಇದನ್ನು ಕೇಳುತ್ತಿದ್ದಂತೆ ಥಟ್ಟನೆ ನೆನಪಾಗುವುದು ನಟ ರವಿಶಂಕರ್.. ಇವರ ದೊಡ್ಡ ದೇಹ, ಮ್ಯಾನರಿಸಂಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ..
ಕನ್ನಡ ಚಿತ್ರರಂಗ ಕಂಡ ಸಾಕಷ್ಟು ಅದ್ಭುತ ಕಲಾವಿದರಲ್ಲಿ ನಟ ರವಿಶಂಕರ್ ಕೂಡ ಒಬ್ಬರು.. ತಮ್ಮ ಅದ್ಭುತ ನಟನೆಯ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ ಇವರು ಅನೇಕ ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ..
ವಿಲನ್ ಎಂದರೇ ಹೀಗೆ ಇರಬೇಕು ಎಂದು ನೋಡುಗರು ಹೇಳುವಷ್ಟರ ಮಟ್ಟಿಗೆ ಖಳನಾಯಕನ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾರೆ ಎಂದರೇ ತಪ್ಪಾಗುವುದಿಲ್ಲ.. ಇನ್ನು ಈ ಬಹುಭಾಷಾ ನಟನ ಫ್ಯಾಮಿಲಿ ಹೇಗಿದೆ? ಇವರ ಪತ್ನಿ ಯಾರು? ಮಗ ಯಾರು? ಎನ್ನುವ ಸಣ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ..
ನಟ ರವಿಶಂಕರ್ ಪತ್ನಿ ಹೆಸರು ಸುಶೀಲ್.. ಇವರು ಮೂಲತಃ ಪಂಜಾಬಿಯವರು.. ಇವರು ಸ್ವಚ್ಚವಾಗಿ ಕನ್ನಡ ಹಾಗೂ ತೆಲುಗನ್ನು ಮಾತನಾಡುತ್ತಾರೆ.. ಈ ದಂಪತಿಗೆ ಒಬ್ಬ ಮಗನೂ ಇದ್ದಾನೆ..
ಹೌದು ನಟ ರವಿಶಂಕರ್ ಹಾಗೂ ಸುಶೀಲ ಅವರಿಗೆ ಒಬ್ಬ ಮಗನಿದ್ದು ಅವರ ಹೆಸರು ಅದ್ವೈಯ್.. ಇವರೂ ಕೂಡ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ..