Karnataka Assembly Elections: ಮತಚಲಾಯಿಸಿ ಸೆಲ್ಫಿಗೆ ಫೋಸ್ ನೀಡಿದ ಸ್ಯಾಂಡಲ್ ವುಡ್ ತಾರೆಯರು...
ಬೆಳಗ್ಗೆ 7 ಗಂಟೆಯಿಂದಲೇ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಸ್ಯಾಂಡಲ್ ವುಡ್ ತಾರೆಯರಾದ ಅಮೂಲ್ಯ, ಆಶಾ ಭಟ್, ಮಿಲನಾ ನಾಗರಾಜ್, ಅನಿತಾ ಭಟ್, ಅಮೃತಾತಮ್ಮ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುತ್ತಿದ್ದಾರೆ.
ಹಾಸನದ ಅರಸೀಕೆರೆಯ ಕಾರೇಹಳ್ಳಿ ನಟ ಡಾಲಿ ಧನಂಜಯ್, ಪದ್ಮನಭಾನಗರದ BMN ಕಾಲೇಜ್ ನಲ್ಲಿ ನಟ ರಮೇಶ್ ಅರವಿಂದ್ ಕುಟುಂಬ ಸಮೇತರಾಗಿ ಮತಗಟ್ಟೆಗೆ ತೆರಳಿ ವೋಟ್ ಹಾಕಿದ್ದಾರೆ.
ಅಮೃತ ಅಮೃತ ಅಯ್ಯಂಗಾರ್,ಮೇಘನಾ ಗಾಂವ್ಕರ್ ಮತದಾನ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ಆಶಾ ಭಟ್,ಶೈನ್ ಶೆಟ್ಟಿ ಕುಂದಾಪುದಲ್ಲಿ ಮತದಾನ ಮಾಡಿ, ಉಳಿದವರಿಗೂ ಮತದಾನ ಮಾಡುವಂತೆ ಪ್ರೇರೆಪಿಸಿದ್ದಾರೆ.
ನಟಿ ಅಮೂಲ್ಯ ಜಗದೀಶ್ ದಂಪತಿಗಳು ಬೆಂಗಳೂರಿನ ಆರ್ಆರ್ ನಗರದಲ್ಲಿ ಮತ ಚಲಾಯಿಸಿದ್ದಾರೆ.
ನಟ ಜಗ್ಗೇಶ್ ದಂಪತಿ ಸೇರಿದಂತೆ ಹಲವರು ಮತದಾನ ಮಾಡಿದ್ದಾರೆ.
ಜೆಪಿ ನಗರ ಸೆಂಟ್ ಪಾಲ್ ಸ್ಕೂಲ್ನಲ್ಲಿ ಮತ ಚಲಾಯಿಸಲು ಬಂದ ಸಪ್ತಮಿ ಗೌಡ
ಕತ್ರಗುಪ್ಪೆ ಮತಗಟ್ಟೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ದಂಪತಿ ಹಾಗೂ ಮಲ್ಲೇಶ್ವರದಲ್ಲಿ ನಟಿ ಸುಧಾರಾಣಿ ಮತದಾನ ಮಾಡಿದ್ದಾರೆ
ನಟಿ ಪ್ರೇಮಾ, ಅಯ್ಯಪ್ಪ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಊರಿನಲ್ಲಿ ಮತಚಾಯಿಸಿದ್ದಾರೆ