Ashika Ranganath Photos : ಪಟಾಕಿ ಪೋರಿ.. ನಾಟಿ ಚೋರಿ.. ಯುವಕರ ಹೃದಯ ಕದ್ದ ಮದನಾರಿ!
ಸ್ಯಾಂಡಲ್ವುಡ್ ಬ್ಯೂಟಿಫುಲ್ ನಟಿಗಳಲ್ಲಿ ಒಬ್ಬರು ಆಶಿಕಾ ರಂಗನಾಥ್. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ಚೆಲುವೆಗೆ ಅಭಿಮಾನಿ ಬಳಗವಿದೆ.
ಸದ್ಯ ಬಹು ಬೇಡಿಕೆಯಿರುವ ನಟಿಗಳ ಸಾಲಿನಲ್ಲಿ ಇರುವವರು. ಸ್ಯಾಂಡಲ್‍ವುಡ್‍ನ ಚುಟು ಚುಟು ಹುಡುಗಿ ಖ್ಯಾತಿಯ ನಟಿ ಆಶಿಕಾ ರಂಗನಾಥ್ ಇದೀಗ ‘ರೇಮೊ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಸದ್ಯ ಆಶಿಕಾ ರಂಗನಾಥ್ ನಟನೆಯ ‘ರೇಮೊ’ ಸಿನಿಮಾ ನವೆಂಬರ್ 25ಕ್ಕೆ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನೆರವೇರಿತು.
ಟ್ರೈಲರ್ ಮೂಲಕ ಸದ್ದು ಮಾಡಿರುವ ‘ರೇಮೊ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ವೇಳೆ ಆಶಿಕಾ ಅವರನ್ನು ಅಭಿಮಾನಿಗಳು ಸಖತ್ ಖುಷಿಪಟ್ಟರು.
ಇದೀಗ ಕೆಂಪು ಲಂಗ ಧರಿಸಿ ಫೋಟೋಶೂಟ್ ಮಾಡಿಸಿರುವ ಆಶಿಕಾ ರಂಗನಾಥ್, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಆಶಿಕಾ ಸಖತ್ ಕ್ಯೂಟ್ ಆಗಿ ಕಾಣಿಸಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.