Actress Bhavana: ಈ ಖ್ಯಾತ ನಟನ ಜತೆ ಮದುವೆ.. ನಾಲ್ಕು ಬಾರಿ ಗರ್ಭಪಾತ, ಸತ್ತೇ ಹೋಗಿದ್ದೇ.. ನಟಿ ಭಾವನಾ ಅನುಭವಿಸಿದ ಕಷ್ಟ ಒಂದೆರಡಲ್ಲ.!
Sandalwood Actress Bhavana : ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ ಸಿನಿಮಾ ನಾಯಕಿ ಭಾವನಾ ಹೇಳಿದ ಮಾತುಗಳಿಂದ ಫ್ಯಾನ್ಸ್ ಶಾಕ್ ಆಗಿದ್ದಾರೆ. ಮದುವೆ.. ಗರ್ಭಪಾತ.. ಸಾವಿನ ಬಗ್ಗೆ ನಟಿ ಭಾವನಾ ಹೇಳಿಕೆ ವೈರಲ್ ಆಗ್ತಿದೆ.
ಭಾವನಾ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಖ್ಯಾತ ನಟಿ. 16 ನೇ ವಯಸ್ಸಿನಲ್ಲಿ ನಮ್ಮಾಳ್ ಎಂಬ ಮಲಯಾಳಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಈ ಚೆಲುವೆ ಎಂಟ್ರಿ ಕೊಟ್ಟರು.
2010 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ ಜಾಕಿ ಸಿನಿಮಾದಲ್ಲಿ ನಟಿಸಿ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಕಿಚ್ಚ ಸುದೀಪ್ ನಟನೆಯ ವಿಷ್ಣುವರ್ಧನ, ಗಣೇಶ್ ಅವರ ರೋಮಿಯೊ ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ನಟಿಸಿದರು.
ನಟಿ ಭಾವನಾ ಸಂದರ್ಶನವೊಂದರಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ. ತಮ್ಮ ಮದುವೆ ಮತ್ತು ಗರ್ಭಪಾತದ ಬಗ್ಗೆ ಭಾವನಾ ಮಾತನಾಡಿದ್ದು ಎಲ್ಲರ ಗಮನಸೆಳೆಯುತ್ತಿದೆ.
ಮಲಯಾಳಿ ನಟ ಅನೂಪ್ ಮೆನನ್ ಜತೆಗೆ ಮದುವೆ ಆಯ್ತು, ಮೊದಲೇ ನಾಲ್ಕು ಬಾರಿ ಗರ್ಭಪಾತ ಆಗಿತ್ತು. ಅದೊಂದು ದಿನ ಸತ್ತು ಕೂಡ ಹೋಗಿದ್ದೆ ಎಂದು ನಟಿ ಭಾವನಾ ಹೇಳಿದ್ದಾರೆ.
ಆದರೆ ಭಾವನಾ ಹೇಳಿದ ಈ ಮಾತುಗಳು ಮಾರ್ಮಿಕ ನುಡಿಗಳಾಗಿವೆ. ನಟಿ ಭಾವನಾ ಇಲ್ಲಿ ತಮ್ಮ ಬಗ್ಗೆ ಹಬ್ಬಿದ್ದ ಗಾಸಿಪ್ ಗಳ ಬಗ್ಗೆ ಮಾತನಾಡಿದ್ದಾರೆ.
ಮಲಯಾಳಂ ನಟ ಅನೂಪ್ ಮೆನನ್ ಜತೆಗೆ ಭಾವನಾ ಮದುವೆ ಆಗಿದ್ದಾರೆ ಎಂಬ ವದಂತಿ ಒಂದು ಜೋರಾಗಿ ಸುದ್ದಿ ಮಾಡಿತ್ತು. ಅಲ್ಲದೇ ನಟಿ ಭಾವನಾ ಅವರಿಗೆ ನಾಲ್ಕು ಬಾರಿ ಗರ್ಭಪಾತ ಆಗಿದೆ ಎಂದು ಸುಳ್ಳು ಸುದ್ದಿ ಹರಡಲಾಗಿತ್ತು. ಮತ್ತೊಮ್ಮೆ ನಟಿ ಭಾವನಾ ಇನ್ನಿಲ್ಲ ಎಂದೇ ವದಂತಿ ಹಬ್ಬಿತ್ತು.
ಈ ಗಾಸಿಪ್‌ಗಳ ಕುರಿತು ನಟಿ ಭಾವನಾ ಮಾತನಾಡಿದ್ದಾರೆ. ನಟಿ ಭಾವನಾ ಬಹುಕಾಲದ ಗೆಳೆಯ ಮತ್ತು ಸ್ಯಾಂಡಲ್‌ವುಡ್ ನಿರ್ಮಾಪಕ ನವೀನ್ ಎಂಬುವವರನ್ನು ನವೆಂಬರ್ 22, 2018 ರಲ್ಲಿ ಮದುವೆಯಾದರು.