Deepika Das: ಸದ್ದಿಲ್ಲದೇ ಸಪ್ತಪದಿ ತುಳಿದ ನಟಿ ದೀಪಿಕಾ ದಾಸ್, ಹುಡುಗ ಯಾರು ಗೊತ್ತಾ?
ಸ್ಯಾಂಡಲ್ವುಡ್ ನಟಿ, ಬಿಗ್ಬಾಸ್ ಖ್ಯಾತಿಯ ದೀಪಿಕಾ ದಾಸ್ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಬೀಚ್ ಸೈಡ್ ವೆಡ್ಡಿಂಗ್ ಫೊಟೋ ಶೇರ್ ಮಾಡುವ ಮೂಲಕ ʼನಾಗಿಣಿʼ ಸೀರಿಯಲ್ ಖ್ಯಾತಿಯ ನಟಿ ದೀಪಿಕಾ ದಾಸ್ ತಮ್ಮ ಅಭಿಮಾನಿಗಳಿಗೆ ಸರ್ಪೈಸಿಂಗ್ ಶಾಕ್ ನೀಡಿದ್ದಾರೆ.
ನಟಿಯ ದಿಢೀರ್ ಮದುವೆಯ ಫೋಟೋಗಳನ್ನು ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರರು ಶಾಕ್ ಆಗಿದ್ದಾರೆ. ಇದು ಮದುವೆಯಾ? ಅಥವಾ ಆ್ಯಡ್ ಶೂಟಿಂಗ್ ಫೋಟೋಗಳಾ? ಅಂತಾ ಕನ್ಫ್ಯೂಸ್ ಆಗಿದ್ದಾರೆ. ಆದರೆ ನಟಿಯ ಪೋಸ್ಟ್ ನೋಡಿದರೆ ಇದು ರಿಯಲ್ ಮದುವೆಯಂತಿದೆ.
ಮೂರು ಫೋಟೋಗಳನ್ನು ಹಂಚಿಕೊಂಡಿರುವ ನಟಿ ದೀಪಿಕಾ ದಾಸ್, ʼಮಿಸ್ಟರ್ & ಮಿಸಸ್ ಡಿʼ ಎಂದು ಬರೆದುಕೊಂಡಿದ್ದು, ರೆಡ್ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ದೀಪಿಕಾ ದಾಸ್ ಬಿಳಿ ಬಣ್ಣದ ಕೇಸರಿ ಅಂಚಿನ ಸೀರೆ ಉಟ್ಟಿದ್ದು, ವರನ ಕೈ ಹಿಡಿದುಕೊಂಡು ಖುಷಿಯಿಂದ ಹೆಜ್ಜೆ ಹಾಕುತ್ತಿರುವ ಫೋಟೋ ಕಂಡ ಪ್ರತಿಯೊಬ್ಬರಿಗೆ ಇದು ನಿಜವೇ? ಅನ್ನೋ ಪ್ರಶ್ನೆ ಮೂಡಿದೆ.