ಬಾಲ್ಯ ವಿವಾಹ, ಹತ್ತಾರು ವಿವಾದ ಎದುರಿಸಿದ ರಾಧಿಕಾ ಕುಮಾರಸ್ವಾಮಿ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತಾ.!?

Tue, 20 Feb 2024-9:31 am,

ಮೂಲತಃ ಮಂಗಳೂರಿನವರಾದ ರಾಧಿಕಾ ಸಿನಿ ಜರ್ನಿ 2002 ರಲ್ಲಿ ತೆರೆಕಂಡ ʻನಿನಗಾಗಿʼ ಚಿತ್ರದ ಮೂಲಕ  ಶುರುವಾಯಿತು. ಒಂಭತ್ತನೆಯ ತರಗತಿ ಓದುತ್ತಿದ್ದಾಗಲೇ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು.

ತವರಿಗೆ ಬಾ ತಂಗಿ, ರಿಷಿ, ಮಂಡ್ಯ, ಅಟೋ ಶಂಕರ್, ಅಣ್ಣ ತಂಗಿ ಹೀಗೆ ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಖ್ಯಾತ ನಟಿ ಮತ್ತು ನಿರ್ಮಾಪಕಿ ಆಗಿ ರಾಧಿಕಾ ಗುರುತಿಸಿಕೊಂಡಿದ್ದಾರೆ. ಲವ್ ಲೈಫ್, ಮದುವೆ ವಿಚಾರವಾಗಿಯೂ ರಾಧಿಕಾ ಆಗಾಗ ಸುದ್ದಿಯಾಗಿದ್ದರು.

ನಟಿ ರಾಧಿಕಾ 14 ನೇ ವಯಸ್ಸಿನಲ್ಲಿದ್ದಾಗಲೇ ರತನ್ ಕುಮಾರ್ ಎಂಬುವವರ ಜೊತೆ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬಾಲ್ಯ ವಿವಾಹ ನಡೆಯಿತು. ಆದರೆ 2002 ಆಗಸ್ಟ್ ನಲ್ಲಿ ಹೃದಯಾಘಾತದಿಂದ ರತನ್ ಕುಮಾರ್ ನಿಧನರಾದರು ಎಂದು ಹೇಳಲಾಗುತ್ತೆ.

ರಾಧಿಕಾ 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದ ಮದುವೆ ವಿವಾದದ ಬಳಿಕ ಸಿನಿರಂಗದಿಂದ ಬ್ರೇಕ್ ಪಡೆದರು.  ನಿರ್ಮಾಪಕಿಯಾಗಿ ರೀ ಎಂಟ್ರಿ ಕೊಟ್ಟ ರಾಧಿಕಾ ಕುಮಾರಸ್ವಾಮಿ 2012 ರಲ್ಲಿ ‘ಲಕ್ಕಿ’ ಸಿನಿಮಾ ನಿರ್ಮಿಸಿದರು. ಯಶ್ ಹಾಗೂ ರಮ್ಯಾ ನಟಿಸಿರುವ ಈ ಸಿನಿಮಾ ಹಿಟ್ ಕಂಡಿತು.

ರಾಧಿಕಾ ಕುಮಾರಸ್ವಾಮಿ ಕೋಟ್ಯಂತರ ರೂಪಾಯಿ ಆಸ್ತಿಯ ಒಡತಿ. ವರಸಿಗಳ ಪ್ರಕಾರ, ರಾಧಿಕಾ ಕುಮಾರಸ್ವಾಮಿ 124 ಕೋಟಿ ಆಸ್ತಿಗೆ ಒಡತಿಯಾಗಿದ್ದಾರೆ ಎನ್ನಲಾಗುತ್ತದೆ. ಆದರೆ ಈ ಬಗ್ಗೆ ನಟಿ ರಾಧಿಕಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link