Ramya Photo Viral : ಮೋಹಕತಾರೆ ರಮ್ಯಾ 18ನೇ ವಯಸ್ಸಿನ ಫೋಟೋ ಸಖತ್ ವೈರಲ್..!

Wed, 03 Aug 2022-1:33 pm,

ಈ ಸಿನಿ ತಾರೆಯರು ತಮ್ಮ ಹಳೆಯ ಫೋಟೋಗಳ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಹಳೆಯ ನೆನಪುಗಳನ್ನ ಮೆಲಕು ಹಾಕುತ್ತಿರುತ್ತಾರೆ. ಈಗ ಮೋಹಕತಾರೆ ರಮ್ಯಾ ತಮ್ಮ 18ನೇ ವಯಸ್ಸಿನ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.  

ಸಧ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ರಮ್ಯಾ ತಮ್ಮ 21ನೇ ವಯಸ್ಸಿನಲ್ಲಿ 'ಅಭಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು. ಈ ಫೋಟೋ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವ ಮುನ್ನ ಕಾಲೇಜಿನ ಐಡಿ ಕಾರ್ಡ್‌ ಶೇರ್ ಮಾಡಿದ್ದಾರೆ.

18ನೇ ವಯಸ್ಸಿನಲ್ಲಿ ನಾನು ಎಂಬ ಕ್ಯಾಪ್ಶನ್ ನೊಂದಿಗೆ ರಮ್ಯಾ ಶೇರ್ ಮಾಡಿದ್ದಾರೆ. ರಮ್ಯಾ ಕಾಲೇಜು ದಿನದ ಫೋಟೋ ನೋಡಿ ಫ್ಯಾನ್ಸ್ ಕೂಡ ಫುಲ್ ಖುಷಿಯಾಗಿದ್ದಾರೆ.

ಟಾಪ್ 5 ನಟಿಯರ ಲಿಸ್ಟ್​ನಲ್ಲಿ ರಮ್ಯಾ : ರಮ್ಯಾ ಯಾವುದೇ ಸಿನಿಮಾದಲ್ಲಿ ನಟಿಸದೇ ಇದ್ದರೂ ಸಹ ಟಾಪ್ 5 ನಟಿಯರ ಪಟ್ಟಿಯಲ್ಲಿ ಹೆಸರುಗಳಿಸಿದ್ದಾರೆ. ಓರಾಮ್ಯಾಕ್ಸ್​ ಸಂಸ್ಥೆಯು ಕನ್ನಡದ ಫೇಮಸ್ ಟಾಪ್​ ನಟಿಯರ ಸಮೀಕ್ಷೆ ಮಾಡಿದ್ದು, ಅದರಲ್ಲಿ ರಮ್ಯಾ ಕೂಡ ಸ್ಥಾನ ಪಡೆದಿದ್ದಾರೆ. ಈ ಸಮೀಕ್ಷೆಯನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿರುವ ಅವರು ನಾನು ಕಳೆದ 8 ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದರೂ ಸಹ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದ್ದು ಬಹಳ ಸಂತೋಷವಾಗಿದೆ. ರಚಿತಾ ರಾಮ್​, ಆಶಿಕಾ ರಂಗನಾಥ್, ರಾಧಿಕಾ ಪಂಡಿತ್ ಹಾಗೂ ರಶ್ಮಿಕಾ ಜೊತೆ ಸ್ಥಾನ ಪಡೆದಿರುವುದು ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link