ದಾಸನ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್‌ ಮಂದಿ : ಚಪ್ಪಲಿ ಎಸೆದವರಿಗೆ ಹೀಗಂದ್ರು ನಟ, ನಟಿಯರು..!

Mon, 19 Dec 2022-4:26 pm,

ನಟಿ ಅಮೂಲ್ಯ ಕೂಡಾ ಈ ಘಟನೆಗೆ ವಿರೋಧ ವ್ಯಕ್ತಪಡಿಸಿದ್ದು, ಹೊಸಪೇಟೆಯಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸರ್‌ ಅವರ ಮೇಲೆ ನಿನ್ನೆ ನಡೆದ ಕಿಡಿಗೇಡಿಗಳ ಕೃತ್ಯ ಖಂಡನೀಯ. ಕಲಾವಿದರಿಗೆ, ಕಲೆಗೆ ಬೆಲೆ ಕೊಡದಿರುವುದು ಎಲ್ಲಾ ಕನ್ನಡಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಇದಾಗಿದೆ. ಈ ರೀತಿಯ ನೀಜ ಕೃತ್ಯಕ್ಕೆ ಯಾರೂ ಇಳಿಯಬಾರದು. ಪೊಲೀಸ್‌ ಇಲಾಖೆ ಆ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕ್ರಮಗೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ವಿನಂತಿ ಎಂದರು.

ನಿನ್ನೆ ಹೊಸಪೇಟೆಯಲ್ಲಿ ನಡೆ ಘಟನೆ ನಿಜಕ್ಕೂ ನನಗೆ ನೋವುಂಟು ಮಾಡಿತು. ದರ್ಶನ್‌ ಅವರು ಒಬ್ಬ ಒಳ್ಳೆಯ ವ್ಯಕ್ತಿ. ಅವರಿಗೆ ನಾವು ಗೌರವ ನೀಡಬೇಕು. ಯಾರೂ ಆ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಖಾ ಸುಮ್ಮನೆ ಅವರ ವ್ಯಕ್ತಕ್ವಕ್ಕೆ ಅಗೌರವ ಕೊಟ್ಟಂತಾಗುತ್ತದೆ. ಸದಾ ಪ್ರೀತಿಯನ್ನು ಹಂಚಿಕೊಳ್ಳೋಣ ಎಂದು ನಟಿ ಆಶಿಕಾ ರಂಗನಾಥ್‌ ಹೇಳಿದ್ದಾರೆ.

ನಟ ಧನೀರ್‌ ಗೌಡ ಅವರು, ನಿನ್ನೆ ಹೊಸಪೇಟೆಯಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ನಿಮ್ಮ ಮೇಲೆ ನಡೆದಿರುವ ಪಿತೂರಿ ಖಂಡನೀಯ. ನಿಮ್ಮ ಸಹಸ್ರ ಅಭಿಮಾನಿಗಳಲ್ಲಿ ಒಬ್ಬನಾಗಿ ಸಾಯೋವರೆಗೂ ನಿಮ್ಮ ಮೇಲಿನ ಅಭಿಮಾನ ದುಪ್ಪಟ್ಟಾಗುತ್ತೋ ಹೊರತು ಕಡಿಮೆಯಾಗುವುದಿಲ್ಲ. ಈ ಘಟನೆಗೆ ಕಾರಣರಾದವರಿಗೆ ಭಗವಂತ ಒಳ್ಳೆಯದೇ ಮಾಡಲಿ. ಕೆಟ್ಟದು ಬಯಸಿದವರಿಗೂ ಒಳ್ಳೆದು ಮಾಡಿ ಎಂದು ಹೇಳಿಕೊಟ್ಟಿದ್ದಿರಾ ಬಾಸ್. ಕರ್ಮ ಎನ್ನುವುದು ಯಾರಿಗೂ ಬಿಟ್ಟಿರುವುದಿಲ್ಲ, ಕರ್ಮ ತಿರುಗುತ್ತೆ. ಚಪ್ಪಲಿ ಎಸೆದ ವ್ಯಕ್ತಿಗೂ, ಅವನ ಮನಸ್ಥಿತಿಗೂ ಮತ್ತು ಪ್ರಚೋದಿಸಿದರವರಿಗೂ ನೆಮ್ಮದಿ ಸಿಗಲಿ. ನಿಮ್ಮ ಸೆಲೆಬ್ರಿಟಿ ಅಭಿಮಾನಿಗಳ ಮುಂದೆ ಈ ಘಟನೆಗಳು ಸಾಸಿವೆ ಕಾಳಿಗೆ ಸಮ. ನಿಮ್ಮ ಮೇಲಿನ ಅಭಿಮಾನದೊಂದಿಗೆ.. ಧನ್ವೀರ್, ನಿಮ್ಮೊಂದಿಗೆ ಸದಾ ನಾವು" ಎಂದಿದ್ದಾರೆ.

ಇನ್ನು ಧನ್ಯಾ ರಾಮ್‌ಕುಮಾರ್‌ ಅವರು ಮಾತನಾಡಿ, ನಮ್ಮದು ಕಲಾವಿದರ ಜಾತಿ, ನಾವೆಲ್ಲರೂ ಒಂದೇ ಕಲಾವಿದರಿಗೆ ದಯವಿಟ್ಟು ಮರ್ಯಾದೆ ಕೊಡಬೇಕು. ದಯವಿಟ್ಟು...!! ಕಲಾವಿದನಿಗೆ ಗೌರವ ಮತ್ತು ಪ್ರೀತಿ ಬಲು ಮುಖ್ಯ. ದಯವಿಟ್ಟು ಕಲಾವಿದರಿಗೆ ಗೌರವ ನೀಡಿ ಎಂದಿದ್ದಾರೆ.

ಈ ಘಟನೆಗೆ ಭಾರಿ ವಿರೋಧ ವ್ಯಕ್ತ ಪಡಿಸಿರುವ ನಟಿ ನಿಶ್ವಿಕಾ ನಾಯ್ಡು, ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ, ವಿಡಿಯೋ ನೋಡಿ ನನಗೆ ಕೋಪ ಬಂತು. ಉದ್ದೇಶ ಪೂರ್ವಕವಾಗಿರಲಿ, ದುರುದ್ದೇಶದಿಂದಲೇ ಮಾಡಿರಲಿ, ಇದು ತಪ್ಪು ಅಲ್ವಾ...! ನೀವು ಅವರನ್ನು ಒಬ್ಬ ನಟನಾಗಿ, ಸ್ಟಾರ್‌ ಆಗಿ ಇಷ್ಟ ಪಡಲ್ಲ ಅಂದ್ರೆ ಬಿಡಿ, ಆದ್ರೆ ಒಬ್ಬ ಮನುಷ್ಯನನ್ನಾಗಿ ನೋಡಿ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ ಅಷ್ಟೇ. ಒಂದು ಮಾತು.. ಸೋಷಿಯಲ್‌ ಮೀಡಿಯಾದಲ್ಲಿ ಮತ್ತು ದೈಹಿಕವಾಗಿ ದರ್ಶನ್‌ ಅವರನ್ನು ಅವಮಾನ ಮಾಡುವುದರಿಂದ ಅವರನ್ನು ಕುಗ್ಗಿಸಲು ಸಾಧ್ಯವಿಲ್ಲ. ಅವರು ಇಂತಹ ಅನೇಕ ನೋವುಗಳನ್ನು ಅನುಭವಿಸಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಅಲ್ಲದೆ, ದರ್ಶನ್‌ ಅವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಜನತೆ ಹಾಗೂ ಅವರ ಅಭಿಮಾನಿಗಳು, ನಾವು ಅವರ ಜೊತೆ ನಿಲ್ಲಬೇಕು ಎಂದು ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ವಿಜಯನಗರದ ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ನಟ ನೀನಾಸಂ ಸತೀಶ್ ಮಾತನಾಡಿದ್ದು, ಎತ್ತ ತಲುಪುತ್ತಿದ್ದೇವೆ ನಾವು? ಮನುಷ್ಯತ್ವವಿಲ್ಲದ ಪ್ರಪಂಚದ ಕಡೆಗಾ? ನಾವೆಲ್ಲರು ಒಂದೇ ಕುಲದವರು ಒಡೆದಾಡದಿರಿ. ನೀರು ಗಾಳಿ, ಅನ್ನ ಎಲ್ಲರಿಗೂ ಒಂದೇ. ಜಗತ್ತಿನ ಎಲ್ಲ ಕಲಾವಿದರು ಒಂದೇ. ಈ ರೀತಿ ದರ್ಶನ್ ಅವರ ಮೇಲೆ ಎಸೆದ ಎಸೆತ ಸರಿಯೇ? ಸಾಕು. ತಪ್ಪು ಮಾಡಿದವರು ಕ್ಷಮೆ ಕೇಳಿ ಮನುಷ್ಯರಾಗಿ. ಒಬ್ಬರಿಗೊಬ್ಬರು ನಮ್ಮ ನಮ್ಮಲ್ಲೆ ಕಿತ್ತಾಡೋದು ನಿಲ್ಲಿಸಿ. ಯಾರೋ ಒಬ್ಬರು ಮಾಡೋ ತಪ್ಪು ಎಲ್ಲರಿಗು ಅವಮಾನ. ನಾವು ನಿಮ್ಮೊಟ್ಟಿಗಿದ್ದೇವೆ ಸಾರ್ ಎಂದು ಹೇಳಿದ್ದಾರೆ.

ಘಟನೆ ಕುರಿತು ಅಸಮಾಧಾನ ಹೊರ ಹಾಕಿರುವ ನಟ ವಸಿಷ್ಠ ಸಿಂಹ, ಅಭಿಮಾನ ಅತಿರೇಕ ಆಗದಿರಲಿ, ಯಾವುದೇ ಕಲಾವಿದನಿಗೆ ಅವಮಾನ ಮಾಡುವುದೆಂದರೆ ಕಲೆಗೆ ಅಗೌರವ ತೋರಿದಂತೆ. ಕಲಾಸೇವೆಯಲ್ಲಿರುವ ನಮ್ಮ ದರ್ಶನ್‌ ಅವರಿಗೆ ಅವಮಾನ ಮಾಡಿರುವುದು ಖಂಡನೀಯ. ಚಪ್ಪಲಿ ಎಸೆಯುವ ದುಷ್ಕೃತ್ಯ ನಮ್ಮ ಮಣ್ಣಿನ ಸಂಸ್ಕೃತಿಯಲ್ಲೂ ಅಲ್ಲ. ಕನ್ನಡತನಕ್ಕೆ ಶೋಭೆಯೂ ಅಲ್ಲ ಎಂದು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link