Actor Achyuth Kumar: ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತಾ? ಅವರು ಕೂಡ ಫೇಮಸ್ ನಟಿ!!

Tue, 07 May 2024-1:57 pm,

ಕನ್ನಡದ ನಟ ಅಚ್ಯುತ್ ಕುಮಾರ್ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು.. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಸದ್ಯ ಸಾಕಷ್ಟು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ..   

ನಟ ಅಚ್ಯುತ್‌ ಕುಮಾರ್‌ ನಟಿಸಿದ ಬಹತೇಕ ಸಿನಿಮಾಗಳು ದೊಡ್ಡ ಯಶಸ್ಸನ್ನು ಪಡೆದುಕೊಂಡಿವೆ.. ಇತ್ತೀಚೆಗೆ ಬಿಡುಗಡೆಯಾದ ಯುವ ಸಿನಿಮಾದಲ್ಲಿಯೂ ನಟ ತಂದೆಯ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದರು..  

ಅಚ್ಯುತ್‌ ಕುಮಾರ್‌ ಬರೀ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿಯೂ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ.. ಹೀಗಾಗಿಯೇ ಇವರು ಪ್ರತಿಯೊಬ್ಬರಿಗೂ ಚಿರಪರಿಚಿತ..  

ಇನ್ನು ನಟ ಅಚ್ಯುತ್‌ ಕುಮಾರ್‌ ವೈಯಕ್ತಿಕ ವಿಚಾರಕ್ಕೆ ಬಂದರೇ ಇವರ ಪತ್ನಿ ಹೆಸರು ನಂದಿನಿ.. ಇವರೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಇತ್ತೀಚೆಗಷ್ಟೇ ಸತೀಶ್‌ ನೀನಾಸಂ ಅವರ ಅವರ ಸಿನಿಮಾದಲ್ಲಿ ನಂದಿನಿ ಅವರು ಕಾಣಿಸಿಕೊಂಡಿದ್ದರು..   

ನಟ ಅಚ್ಯುತ್‌ ಕುಮಾರ್‌ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆಹಂಚಿಕೊಂಡಿದ್ದಲ್ಲದೇ ಯುವ ನಾಯಕರೊಂದಿಗೂ ತೆರೆಹಂಚಿಕೊಂಡು ಇಂದಿಗೂ ಕನ್ನಡ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link