ನಿರ್ದೇಶಕ, ಗೀತ ರಚನೆಕಾರ ಯೋಗರಾಜ್ ಭಟ್ ಹೆಂಡತಿ, ಮಕ್ಕಳು ಹೇಗಿದ್ದಾರೆ ನೋಡಿ! ಅಪ್ಪನಂತೆ ಮಗಳು ಕವಿತೆಯಲ್ಲಿ ಫೇಮಸ್!!

Mon, 29 Apr 2024-6:36 pm,

ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರಲ್ಲಿ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್‌ ಭಟ್‌ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.. ಇವರ ಹಾಡುಗಳೆಂದರೇ ಅವುಗಳಿಗೆ ಒಂದು ವಿಶೇಷತೆ ಇರುತ್ತದೆ.. ಭಟ್ಟರು ಮಾಡಿದ ಬಹುತೇಕ ಸಿನಿಮಾಗಳು ಭಾಕ್ಸಾಫಿಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿವೆ..   

ಸದ್ಯ ಯೋಗರಾಜ್‌ ಭಟ್ಟರು ಉತ್ತರಕಾಂಡ ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ.. ಇಷ್ಟು ದಿನ ನಿರ್ದೇಶಕರಾಗಿ ಆಕ್ಷನ್‌ ಕಟ್‌ ಹೇಳಿದ್ದ ಭಟ್ಟರು ಇದೀಗ ವಿಭಿನ್ನವಾಗಿ ತೆರೆ ಮೇಲೆ ಮೀಂಚಲಿದ್ದಾರೆ.. ಈ ಸಿನಿಮಾದಲ್ಲಿ ಡಾಲಿ ಧನಂಜಯ್‌ ಹಾಗೂ ಡಾ. ಶಿವರಾಜ್‌ಕುಮಾರ್‌ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ..  

ಇನ್ನು ಯೋಗ್‌ರಾಜ್‌ ಭಟ್ಟರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಅವರ ಪತ್ನಿ ಹೆಸರು ರೇಣುಕಾ.. ಇಬ್ಬರೂ ವಿವಾಹವಾಗಿ 23 ವರ್ಷಗಳು ಕಳೆದಿವೆ.. ಒಬ್ಬರ ಯಶಸ್ವಿ ಸಾಧಕನ ಹಿಂದೆ ಒಂದು ಹೆಣ್ಣು ಇದ್ದೆ ಇರುತ್ತಾಳೆ ಎನ್ನುವ ಮಾತಿಗೆ ಈ ದಂಪತಿಯೂ ನಿದರ್ಶನ ಎಂದೇ ಹೇಳಬಹುದು..   

ಯೋಗರಾಜ್‌ ಭಟ್ಟರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.. ಮೊದಲ ಪುತ್ರಿ ಪುನರ್ವಸು ಇನ್ನೂ ಶಾಲೆಗೆ ಹೋಗುತ್ತಾರೆ.. ಇವರು ತಮ್ಮ ತಂದೆಯಂತೆ ಕವಿತೆ ಬರೆಯುತ್ತಾರೆ.. ಕೆಲವು ದಿನಗಳ ಹಿಂದೆ ಈ ಮಗು ಬರೆದಿರುವ ಕವಿತೆ ಸಖತ್‌ ವೈರಲ್‌ ಆಗಿತ್ತು..   

ಕನ್ನಡ ಚಿತ್ರರಂಗದ ಸಖತ್‌ ಟ್ಯಾಲೆಂಟೆಡ್‌ ನಿರ್ದೇಶಕರಲ್ಲಿ ಒಬ್ಬರಾದ ಯೋಗರಾಜ್‌ ಭಟ್‌ ಅವರು ಸ್ಯಾಂಡಲ್‌ವುಡ್‌ಗೆ ತಮ್ಮದೇ ಆದ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link