ನಟ ತಬಲಾ ನಾಣಿ ಅವರ ಹೆಂಡತಿ, ಮಗಳು ಇವರೇ! ಇವರ ಪುತ್ರಿಯೂ ಸಖತ್ ಫೇಮಸ್!!
ಕಿರುತೆರೆಯಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ತಬಲಾ ನಾಣಿ ತಮಗೆ ಸಿಕ್ಕ ಸಣ್ಣ ಪುಟ್ಟ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬಣ್ಣದ ಲೋಕದಲ್ಲಿ ತಮಗೊಂದು ನೆಲೆಯನ್ನು ಕಂಡುಕೊಂಡರು..
ಸಿನಿರಂಗಕ್ಕೆ ಕಾಲಿಟ್ಟ ಮೇಲೆ ತಮ್ಮ ನಟನಾ ಕೌಶಲ್ಯವನ್ನು ತೋರಿಸಿ ಸೈ ಎನಿಸಿಕೊಂಡ ತಬಲಾ ನಾಣಿ ನೂರಾರು ಪಾತ್ರಗಳಲ್ಲಿ ಸಿನಿಪ್ರಿಯರಿಗೆ ನಗೆಯ ಔತನವನ್ನು ನೀಡಿದ್ದಾರೆ.
ಮಠ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ತಬಲಾ ನಾಣಿ ಈ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.. ಅದಾದ ನಂತರ ಅವರು ಹಲವಾರು ಸಿನಿಮಾಗಳಲ್ಲಿ ಕುಡುಕನ ಪಾತ್ರದಲ್ಲಿ ಮಿಂಚಿದ್ದಾರೆ..
ಇನ್ನು ತಬಲಾ ನಾಣಿಯವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಅವರಿಗೆ ಒಬ್ಬ ಮಗಳಿದ್ದಾಳೆ.. ಅವರ ಹೆಸರು ಚಿತ್ರಾ.. ಇವರೂ ತಂದೆಯಂತಯೇ ಅದ್ಭುತ ಪ್ರತಿಭೆ ಎಂದರೇ ತಪ್ಪಾಗುವುದಿಲ್ಲ.. ಅಪ್ಪ ನಟನೆಯಲ್ಲಿ ಗುರುತಿಸಿಕೊಂಡರೆ, ಪುತ್ರಿ ನಾಯಕಿಯಾಗಿ ಹೆಸರು ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ ಚಿತ್ರ ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು.. ಅವರು ಹಾಡಿರುವ ಕೆಲವು ವಿಡಿಯೋಗಳ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.. ಒಟ್ಟಾರೆಯಾಗಿ ತಂದೆಯಂತೆ ಮಗಳು ಕೂಡ ಪ್ರತಿಭೆಯಲ್ಲಿ ಕಡಿಮೆಯಿಲ್ಲ ಎನ್ನುವಂತಿದ್ದಾರೆ..