ನಟ ಯುವರಾಜ್ ಕುಮಾರ್ ದಾಂಪತ್ಯದಲ್ಲಿ ಬಿರುಕು, ಪತ್ನಿಯಿಂದ ವಿಚ್ಚೇದನ ಕೋರಿ ಅರ್ಜಿ
ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಗುರು @ ಯುವರಾಜ್ ಕುಮಾರ್ ಅವರ ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇದು ರಾಜ್ ಕುಟುಂಬದಲ್ಲಿ ನಡೆಯುತ್ತಿರುವ ಮೊದಲ ಡಿವೋರ್ಸ್ ಕೇಸ್ ಎನ್ನಲಾಗಿದೆ.
ನಟ ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭಾರತೀಯ ವಿವಾಹ ಕಾಯ್ದೆ 13(1)ಅಡಿ, ಹೆಂಡತಿಯಿಂದ ಅಗೌರವ, ಮಾನಸಿಕ ಕ್ರೌರ್ಯ ಎಂದು ಆರೋಪಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದ್ದು ಜುಲೈ 4 ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಈಗ ಅಮೆರಿಕದಲ್ಲಿದ್ದಾರೆ. ಶ್ರೀದೇವಿ ರಾಜ್ ಕುಮಾರ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು.
ಯುವರಾಜ್‌ಕುಮಾರ್ ಮತ್ತು ಶ್ರೀದೇವಿ ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿದ್ದರು. ಶ್ರೀದೇವಿ ಮೈಸೂರು ಮೂಲದವರಾಗಿದ್ದು ದೆಹಲಿಯಲ್ಲಿ ಯುವರಾಜ್‌ಕುಮಾರ್ ಅರಿಗೆ ಪರಿಚಯವಾಗಿದ್ದರು.
ಕೆಲವು ಕಾರಣಗಳಿಂದ ಇಬ್ಬರ ಮದ್ಯೆ ಮನಸ್ತಾಪ ಉಂಟಾಗಿದ್ದು, ಯುವರಾಜ್ ಕುಮಾರ್ ಈಗ ಕೋರ್ಟ್ ಮೂಲಕ ಶ್ರಿದೇವಿಗೆ ಡಿವೋರ್ಸ್ ನೋಟಿಸ್ ಕೊಟ್ಟಿದ್ದಾರೆ.