2400 ಕೋಟಿ ಒಡೆಯನ 2ನೇ ಪತ್ನಿಯಾದ 57 ವರ್ಷದ ಈ ಸ್ಟಾರ್ ನಟಿ 4600 ಕೋಟಿ ಸಾಮ್ರಾಜ್ಯಕ್ಕೆ ಒಡತಿ! ಕನ್ನಡಿಗರ ಹೃದಯಕದ್ದ ಚೆಲುವೆ ಈಕೆ
ಕನ್ನಡ ಸಿನಿಮಾದಲ್ಲಿ ನಟಿಸಿ ಸ್ಯಾಂಡಲ್‌ವುಡ್ ಸಿನಿಪ್ರಿಯರ ಮನಗೆದ್ದ ಈ ನಟಿ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹೊಂದಿದ್ದ ಸ್ಟಾರ್ ಹೀರೋಯಿನ್. ಕನ್ನಡದ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಿಂಬೆ ಹಣ್ಣಿನಂಥ ಹುಡುಗಿ ಬಂದ್ಲು ಹಾಡಿನ ಮೂಲಕ ಸಿನಿರಂಗದಲ್ಲಿ ಛಾಪು ಮೂಡಿಸಿದರು.
ಇಂದು ನಾವು ಹೇಳ ಹೊರಟಿರುವುದು ನಟಿ ಜೂಹಿ ಚಾವ್ಲಾ ಬಗ್ಗೆ. IRS ಅಧಿಕಾರಿಯ ಮಗಳಾದ ಜೂಹಿ ಚಾವ್ಲಾ 1986 ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಬಾಲಿವುಡ್‌ನ ಜೊತೆಗೆ ಸೌತ್ ಸಿನಿಮಾಗಳಲ್ಲಿಯೂ ಹೆಸರುಗಳಿಸಿದರು. ಸಿನಿಮಾರಂಗದಲ್ಲಿ ಖ್ಯಾತಿಯ ಉತ್ತುಂಗಕ್ಕೆ ಏರಿದ್ದರು.
ಬಾಲಿವುಡ್‌ನಲ್ಲಿ ಅನೇಕ ನಟಿಯರು ಕೋಟಿ ಕೋಟಿ ಆಸ್ತಿಯುಳ್ಳ ಉದ್ಯಮಿಗಳನ್ನು ಮದುವೆಯಾಗಿದ್ದಿದೆ. ಜೂಹಿ ಚಾವ್ಲಾ ಕೂಡ ಈ ಪಟ್ಟಿಗೆ ಸೇರುತ್ತಾರೆ. ಉದ್ಯಮಿ ಜಯ್ ಮೆಹ್ತಾ ಅವರನ್ನು ನಟಿ ಜೂಹಿ ಚಾವ್ಲಾ ಪ್ರೀತಿಸಿ ಮದುವೆಯಾದವರು.
ಸಿನಿಮಾ ಸೆಟ್ ಒಂದರಲ್ಲಿ ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ ಮೊದಲ ಬಾರಿಗೆ ಭೇಟಿಯಾದರು. ಜೂಹಿ ಚಾವ್ಲಾ ಶ್ರೀಮಂತ ಉದ್ಯಮಿ ಜೈ ಮೆಹ್ತಾ ಪ್ರೀತಿಯಲ್ಲಿ ಬಿದ್ದರು. ಇಬ್ಬರೂ ತಮ್ಮ ಮದುವೆ ವಿಚಾರವನ್ನು ಸುಮಾರು 6 ವರ್ಷಗಳ ಮುಚ್ಚಿಟ್ಟರು.
ಜೂಹಿ ಚಾವ್ಲಾಗಿಂತ ಮೊದಲು ಜಯ್ ಮೆಹ್ತಾಗೆ ಒಂದು ಮದುವೆಯಾಗಿತ್ತು. ಆದರೆ ಜಯ್ ಮೆಹ್ತಾ ಮೊದಲ ಪತ್ನಿ ವಿಮಾನ ಅಪಘಾತದಲ್ಲಿ ತೀರಿ ಹೋಗಿದ್ದರು. ಜೂಹಿಯನ್ನು ಭೇಟಿಯಾದಾಗ ಜಯ್ ಮೆಹ್ತಾ ಪತ್ನಿ ನಿಧನರಾಗಿದ್ದರು. 1995 ರಲ್ಲಿ ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ ವಿವಾಹವಾದರು.
ಹಳೆಯ ಸಂದರ್ಶನವೊಂದರಲ್ಲಿ, ಜೂಹಿ ಚಾವ್ಲಾ ಈ ಬಗ್ಗೆ ಮಾತನಾಡಿದ್ದರು. ಜಯ್ ಮೆಹ್ತಾ ಜೊತೆ ಮದುವೆಯಾದ ಸಮದಲ್ಲಿ ಜೂಹಿ ಸಿನಿ ಕರಿಯರ್ ಉತ್ತುಂಗದಲ್ಲಿತ್ತು. ಮದುವೆಯಾದ ಬಳಿಕ ನಟಿಯರ ಬೇಡಿಕೆ ಕುಗುತ್ತಿತ್ತು. ಈ ಕಾರಣಕ್ಕೆ ಜಯ್ ಮೆಹ್ತಾ ಮತ್ತು ಜೂಹಿ ಚಾವ್ಲಾ ತಮ್ಮ ಮದುವೆ ಸಂಗತಿ ಬಚ್ಚಿಟ್ಟಿದ್ದರು.
ಅನೇಕ ನಟ ನಟಿಯರು ಆ ಸಮಯದಲ್ಲಿ ಅದೇ ಕೆಲಸವನ್ನು ಮಾಡುತ್ತಿದ್ದರು. 1990 ರ ದಶಕದಲ್ಲಿ ಮೊಬೈಲ್ ಫೋನ್, ಕ್ಯಾಮೆರಾಗಳಿಲ್ಲದ ಕಾರಣ ಈ ಸುದ್ದಿಗಳ ಗೌಪ್ಯತೆ ಉಳಿಯುತ್ತಿತ್ತು. ಸುದ್ದಿ ಹೊರಬರುವ ಸಾಧ್ಯತೆ ತೀರಾ ವಿರಳವಾಗಿತ್ತು ಎಂದಿದ್ದಾರೆ.
ಜಯ್ ಮೆಹ್ತಾ ಅವರನ್ನು ಮದುವೆಯಾದ ಸಂಗತಿ ಹೊರಬಿದ್ದರೆ ತನ್ನ ವೃತ್ತಿಜೀವನವನ್ನು ಕಳೆದುಕೊಳ್ಳುವ ಭಯದಿಂದ ಜೂಹಿ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದರು. ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ 1995 ರಲ್ಲಿ ವಿವಾಹವಾದರು.
ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ ಮದುವೆಯಾಗಿ 6 ವರ್ಷ ಬಳಿಕ ಗರ್ಭಿಣಿಯಾಗಿ ತಾಯಿಯಾಗುವ ಸಮಯದಲ್ಲಿ ವಿವಾಹದ ವಿಷಯವನ್ನು ಬಹಿರಂಗಪಡಿಸಿದರು. ಇದು ಕೊನೆಗೂ ಜೂಹಿ ಕರಿಯರ್ ಮೇಲೆ ಪ್ರಭಾವ ಬೀರಿತು ಜೊತೆಗ ಸಿನಿಮಾ ಆಫರ್‌ಗಳು ಕಡಿಮೆಯಾದವು.
ಜಯ್ ಮೆಹ್ತಾ 2400 ಕೋಟಿ ಆಸ್ತಿಯನ್ನು ಹೊಂದಿರುವ ಭಾರತದ ಶ್ರೀಮಂತ ಉದ್ಯಮಿ. ಜಯ್ ಮೆಹ್ತಾ ‘ದಿ ಮೆಹ್ತಾ ಗ್ರೂಪ್’ ಸ್ಥಾಪಕರಾಗಿದ್ದಾರೆ. 4162 ಕೋಟಿ ರೂಪಾಯಿ ಮೌಲ್ಯದ ಕಂಪನಿ ಜಯ್ ಮೆಹ್ತಾ ಹೊಂದಿದ್ದಾರೆ. ವಿಶ್ವಾದ್ಯಂತ 15,000ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಾರೆ.
ಜೂಹಿ ಚಾವ್ಲಾ 4600 ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದಾರೆ. ಸದ್ಯ ಜೂಹಿಗೆ 57 ವರ್ಷ ವಯಸ್ಸು. 2024 ರ ಹುರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಜೂಹಿ ಚಾವ್ಲಾ ಭಾರತೀಯ ಶ್ರೀಮಂತ ನಟಿ ಎಂದು ತಿಳಿದುಬಂದಿದೆ.
IPL ನ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಹ-ಮಾಲೀಕರಾಗಿರುವ ನಟಿ ಜೂಹಿ ಚಾವ್ಲಾ 2024 ರ ಹುರುನ್ ಇಂಡಿಯಾ ರಿಚ್ ಲಿಸ್ಟ್ ಬಿಡುಗಡೆ ಮಾಡಿದ ಟಾಪ್ 10 ಸ್ವಯಂ-ನಿರ್ಮಿತ ಮಹಿಳೆಯರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.