Actress Malashri: ಮಾಲಾಶ್ರೀ ಅವರ ತಂಗಿ ಕೂಡ ಕನ್ನಡದ ಸ್ಟಾರ್ ನಟಿ! ಆದರೆ ಈ ವಿಚಾರ ಯಾರಿಗೂ ಗೊತ್ತಿಲ್ಲ!!
ಕನ್ನಡ ಸಿನಿ ರಂಗದಲ್ಲಿ ಲೇಡಿ ಟೈಗರ್ ಎಂದೇ ಗುರುತಿಸಿಕೊಂಡವರು ನಟಿ ಮಾಲಾಶ್ರೀ.. ಇವರ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕಾಲವೊಂದಿತ್ತು.. ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬುತ್ತಿದ್ದ ಮಹಾನ್ ಕಲಾವಿದೆ ಈ ನಟಿ..
ಕನ್ನಡಿಗರ ಕನಸಿನ ರಾಣಿ ಎಂಬ ಪಟ್ಟ ಅಲಂಕರಿಸಿದ ಈ ಸ್ಟಾರ್ ನಟಿ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದರು.. ಎಲ್ಲ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೂ ತೆರೆ ಹಂಚಿಕೊಂಡು ದೊಡ್ಡ ಹೆಸರು ಮಾಡಿದ್ದಾರೆ..
ನಂಜುಂಡಿ ಕಲ್ಯಾಣ ಚಿತ್ರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಲಾಶ್ರೀ ಯಾವುದೇ ಭೇದವಿಲ್ಲದೇ ಎಲ್ಲ ಪಾತ್ರಗಳಲ್ಲಿಯೂ ನಟಿಸಿ ಮಿಂಚಿದ್ದಾರೆ.. ರಾಮಾಚಾರಿ, ದುರ್ಗಿ, ಕಿರಣ್ ಬೇಡಿ, ಚಾಮುಂಡಿ, ಹೀಗೆ ಹಲವಾರು ಪಾತ್ರಕ್ಕೆ ಜೀವತುಂಬಿದ ಖ್ಯಾತಿ ಇವರದ್ದು..
ನಟಿ ಮಾಲಾಶ್ರೀ ಅವರಿಗೆ ತಂಗಿಯೊಬ್ಬರಿದ್ದಾರೆ.. ಅವರ ಹೆಸರು ಶುಭಾಶ್ರೀ.. ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ ಇವರು ಅಷ್ಟಾಗಿ ಹೆಸರು ಮಾಡಲು ಸಾಧ್ಯವಾಗಲಿಲ್ಲ.. ದೇವರಾಜ್ ನಟನೆಯ ಸರ್ಕಲ್ ಇನ್ಸ್ಸ್ಟೆಕ್ಟರ್ ಸಿನಿಮಾದಿಂದ ಇವರು ಖ್ಯಾತಿ ಗಳಿಸಿದರು..
ನಂತರ ಅವಕಾಶದಿಂದಾಗಿಯೋ ಅಥವಾ ಅದೃಷ್ಟದಿಂದಾಗಿಯೋ ಶುಭಾಶ್ರೀ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.. ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರು ನಡೆಸಿಕೊಟ್ಟಿರುವ ಕನ್ನಡದ ಕೋಟ್ಯಾಧಿಪತಿಯಲ್ಲಿ ಮಾಲಾಶ್ರೀ ತಂಗಿ ಕಾಣಿಸಿಕೊಂಡಿದ್ದರು..
ಸದ್ಯ ಕನ್ನಡ ಸಿನಿರಂಗದ ಕಿರಣ್‌ಬೇಡಿ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.. ಇವರೂ ಕೂಡ ಮೊದಲ ಸಿನಿಮಾದಲ್ಲೇ ಸಿನಿಪ್ರಿಯರ ಹೃದಯ ಗೆದ್ದಿದ್ದಾರೆ..
ಮಾಲಾಶ್ರೀ ಅವರ ಮಗ ಕೂಡ ಸಖತ್ ಹ್ಯಾಂಡ್‌ಸಮ್ ಆಗಿದ್ದಾರೆ ಅವರೂ ಕೂಡ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಾರಾ ಅಥವಾ ಬೇರೆ ಕ್ಷೇತ್ರದಲ್ಲಿ ಬೆಳೆಯುತ್ತಾರಾ ಕಾದು ನೋಡಬೇಕಿದೆ..