ಅನುಶ್ರೀ ಮದುವೆಗೆ ಇನ್ನು ಮೂರೇ ತಿಂಗಳು ಬಾಕಿ! ಆ್ಯಂಕರ್ ಅನು ಕೈಹಿಡಿಯುವ ಹುಡುಗ ಯಾರು ಗೊತ್ತಾಯ್ತಾ?

Thu, 26 Dec 2024-7:53 am,

Anchor Anushree Marriage : ಕರಾವಳಿ ಚೆಲುವೆ ಅನುಶ್ರೀ ಕನ್ನಡದ ಜನಪ್ರಿಯ ನಿರೂಪಕಿ. ಮಾತಿನಲ್ಲೇ ಪ್ರೇಕ್ಷಕರನ್ನು ಸೆಳೆಯುವ ಈ ಸುಂದರಿ ಅಪ್ಪು ಸ್ಪೆಷಲ್ ಡೇಗೆ ಹಸೆಮಣೆ ಏರ್ತಾರೆ ಎಂಬ ಸುದ್ದಿ ವೈರಲ್‌ ಆಗಿದೆ. ಈ ಮಾತಿನ ಮಲ್ಲಿಯ ಕೈ ಹಿಡಿಯುವ ಹುಡುಗ ಯಾರು ಗೊತ್ತಾಯ್ತಾ?

ಸ್ಯಾಂಡಲ್‌ವುಡ್‌ ಖ್ಯಾತ ನಿರೂಪಕಿ ಅನುಶ್ರೀ ಮದುವೆ ನೋಡಲೆಂದು ಅವರ ಅಭಿಮಾನಿಗಳು ಬಹುದಿನದಿಂದ ಕಾದು ಕುಳಿತಿದ್ದಾರೆ. ಅನುಶ್ರೀ ಮುಂದಿನ ವರ್ಷ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವನ್ನು ಸ್ವತಃ ಅನುಶ್ರೀ ಅವರೇ ತಿಳಿಸಿದ್ದರು.

ಅನುಶ್ರೀ ತಮ್ಮದೇ ಯೂಟ್ಯೂಬ್ ಚಾನೆಲ್‌ ನಡೆಸುತ್ತಿದ್ದಾರೆ. ಇಲ್ಲಿ ಸೆಲಿಬ್ರಿಟಿಗಳ ಸಂದರ್ಶನ ನಡೆಸುತ್ತಾರೆ. ಇದೇ ಯೂಟೂಬ್‌ ಚಾನೆಲ್‌ನಲ್ಲಿ ಅನುಶ್ರೀ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ನಿರೂಪಕಿ ಅನುಶ್ರೀ ಮದುವೆ ಡೇಟ್ ಕೂಡ ರಿವೀಲ್ ಮಾಡಿದ್ದರು.

ಅನುಶ್ರೀ ಚಾಟ್ ಶೋ ನಲ್ಲಿ ತಮ್ಮ ಮದುವೆ ಸಂಗತಿ ಬಗ್ಗೆ ಹೇಳಿದ್ದರು. ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನ, ಸೂರಜ್, ಜಗ್ಗ ಹಾಗೂ ಗಿಲ್ಲಿ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಗಿಲ್ಲಿ, ಅನು ಅಕ್ಕ ನೀವೂ ಆಲ್‌​ ರೆಡಿ ಫಿಕ್ಸ್ ಆಗಿದ್ದೀರಾ ಎಂದು ಹೇಳಿದ್ದರು. 

ಇದಕ್ಕೆ ಅನುಶ್ರೀ ಫಿಕ್ಸ್ ಆಗ್ತಿದ್ದೇನೆ ಎನ್ನುವ ಮೂಲಕ ಶೀಘ್ರವೇ ಹಸೆಮಣೆ ಏರಲಿರುವ ಸುಳಿವು ನೀಡಿದರು. ಆಗ ಸೂರಜ್, ಮುಂದಿನ ಫೆಬ್ರವರಿಯಲ್ಲಿ ಮದುವೆನಾ ಎಂದು ಕೇಳುತ್ತಾರೆ. ಅದಕ್ಕೆ ಅನುಶ್ರೀ ಇಲ್ಲ ಕಣ್ರೋ ನಾನು ಅಪ್ಪು ಫ್ಯಾನ್. ಹೀಗಾಗಿ ಮಾರ್ಚ್​ ನಲ್ಲಿ ಮದುವೆ ಆಗಬಹುದು ಎನ್ನುತ್ತಾರೆ.

ಈ ಮಾತಿನ ಪ್ರಕಾರ, ಅನುಶ್ರೀ ಮದುವೆ ಇನ್ನೂ ಮೂರೇ ತಿಂಗಳು ಬಾಕಿ. ಈ ಸಮಯದಲ್ಲಿ ಅನುಶ್ರೀ ಮದುವೆ ಆಗಲಿರುವ ಹುಡುಗ ಯಾರು ಎಂಬ ಚರ್ಚೆ ಜೋರಾಗಿದೆ. ಅನುಶ್ರೀ ಭಾವಿ ಪತಿಯ ಬಗ್ಗೆ ಜನರಿಗೆ ಕುತೂಹಲ ಮೂಡಿದೆ. 

ಮಾರ್ಚ್ 17ರಂದು ಪುನೀತ್​ ರಾಜ್‌ಕುಮಾರ್ ಹುಟ್ಟು ಹಬ್ಬ. ಆ ದಿನವೇ ಅನುಶ್ರೀ ಹಸೆಮಣೆ ಏರುವ ಬಗ್ಗೆ ಮಾತನಾಡಿದ್ದರು. ಆದರೆ ಆ ಬಳಿಕ ಅನುಶ್ರೀ ಅವರೇ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. 

ಹೊಸ ವರ್ಷದಲ್ಲಾದರೂ ಅನುಶ್ರೀ ತಮ್ಮ ಭಾವಿ ಪತಿಯನ್ನು ಜನರಿಗೆ ಪರಿಚಯಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದಕ್ಕಾಗಿ ಅವರ ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಮಂಗಳೂರು ಮೂಲದ ನಮ್ಮ ಟಿವಿ ಚಾನೆಲ್ ಮೂಲಕ ಕಿರುತೆರೆಗೆ ಅನುಶ್ರೀ ಕಾಲಿಟ್ಟರು. ಅಂತಾಕ್ಷರಿ ಶೋ ಮೂಲಕ ಟಿವಿ ನಿರೂಪಕಿಯಾದರು. ಅನುಶ್ರೀ ETv ಯ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ ಕಾರ್ಯಕ್ರಮದ ಮೂಲಕ ಜನರ ಮನಗೆದ್ದರು.

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಅನುಶ್ರೀ ಸಾಕಷ್ಟು ಜನಪ್ರಿಯರಾದರು. ಬಹು ವರ್ಷಗಳಿಂದ ಜೀ ತಂಡದಲ್ಲಿರುವ ಆಂಕರ್‌ ಅನುಶ್ರೀ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿ ಹೀಗೆ ಅನೇಕ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link