Actor Mohan Shankar: ಕನ್ನಡದ ಖ್ಯಾತ ನಟ ಮೋಹನ್ ಶಂಕರ್ ಪತ್ನಿ ಇವರೇ!! ಮಗ ಕೂಡ ಸಖತ್ ಫೇಮಸ್!
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರ ಪೈಕಿ ನಟ ಮೋಹನ್ ಶಂಕರ್ ಕೂಡ ಒಬ್ಬರು.. ಇವರು ಸಾಕಷ್ಟು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ..
ಕೃಷ್ಣ ನೀ ಲೇಟಾಗಿ ಬಾರೋ ಸಿನಿಮಾದ ಮೂಲಕ ನಿರ್ದೇಶನಕ್ಕಿಳಿದ ನಟ ಮೋಹನ್ ಶಂಕರ್ ಉತ್ತಮ ಬರಹಗಾರರೂ ಆಗಿದ್ದಾರೆ.. ಶಿವಣ್ಣ ಹಾಗೂ ಉಪೇಂದ್ರ ನಟಿಸಿದ ಲವಕುಶ ಚಿತ್ರಕಥೆಯನ್ನು ಬರೆದದ್ದು ಇವರೇ. .
ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಮೋಹನ್ ಶಂಕರ್ ಕಿಚ್ಚ ಸುದೀಪ್ ನಿರೂಪಣೆಯ ಬಿಗ್‌ಬಾಸ್ ಸೀಸನ್ 4ರಲ್ಲಿ ಭಾಗವಹಿಸಿ ಇನ್ನಷ್ಟು ಖ್ಯಾತಿ ಗಳಿಸಿದ್ದರು..
ಇನ್ನು ನಟ ಮೋಹನ್ ಶಂಕರ್ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರ ಪತ್ನಿಯ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲ.. ಈ ದಂಪತಿಗೆ ಒಬ್ಬ ಮಗನಿದ್ದು ಅವರೂ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..
ವಿಶೇಷವೆಂದರೇ ನಟ ಮೋಹನ್ ಶಂಕರ್ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಮಣ್ಯ ಸಿರೀಯಲ್‌ನಲ್ಲಿ ನಾಯಕಿಯ ತಂದೆಯಾಗಿ ನಟಿಸುವ ಮೂಲಕ ಧಾರವಾಹಿ ಪ್ರಿಯರ ಗಮನ ಸೆಳೆಯುತ್ತಿದ್ದಾರೆ..