Actor Ramkrishna: ಮನೆ ಕೆಲಸದವಳನ್ನೇ ಪ್ರೀತಿಸಿ ಮದುವೆಯಾದ ಹಿರಿಯ ನಟ ರಾಮಕೃಷ್ಣ! ಇವರ ಮಗ ಕೂಡ ತುಂಬಾ ಫೇಮಸ್!!
ನಟ ರಾಮಕೃಷ್ಣ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಒಂದು ಕಾಲದಲ್ಲಿ ಬಹುಬೇಡಿಕೆ ನಟರಾಗಿದ್ದ ಇವರು ಶಿರಸಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ 1951 ರಲ್ಲಿ ಜನಿಸಿದರು.. ಸದ್ಯ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ..
ಕನ್ನಡ ಸೇರಿದಂತೆ ತಮಿಳು ತೆಲುಗು ಚಿತ್ರರಂಗದಲ್ಲೂ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ ಇವರು 1990ರ ದಶಕದಿಂದ ಹೆಚ್ಚು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..
ಒಂದು ಕಾಲದಲ್ಲಿ ಬಹುಬೇಡಿಕೆಯ ಹಾಗೂ ನಾಯಕ ನಟನಾಗಿ ಮಿಂಚಿದ್ದ ರಾಮಕೃಷ್ಣ ಅವರು ಕಿಚ್ಚ ಸುದೀಪ್ ಅವರ ಬಚ್ಚನ್ ಹಾಗೂ ಶರಣ್ ಅವರ ರಾಜ ರಾಜೇಂದ್ರ ಸಿನಿಮಾಗಳಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..
ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ತುಂಬಾ ಸರಳ ವ್ಯಕ್ತಿಯಾಗಿರುವ ಇವರು ಪುಟ್ಟಣ್ಣ ಅವರ ಮನೆ ಕೆಲಸದ ಆಳು ಮಂಗಳ ಎಂಬುವರನ್ನು ಮದುವೆಯಾದರು..
ಯಾವುದೇ ಅಹಂ ಇಲ್ಲದೇ ಮದುವೆಯಾಗಿ ಉತ್ತಮವಾದ ಜೀವನ ನಡೆಸುತ್ತಿರುವ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ..
ಅವರೂ ಚೆನ್ನಾಗಿ ಓದಿ ಒಳ್ಳೆಯ ವ್ಯವಹಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.. ವಿಶೇಷವೆಂದರೇ ಇವರ ಮಗ ಅಕ್ಷತ್ ವಿದೇಶಿ ಹೆಣ್ಣು ಮಗಳನ್ನು ಮದುವೆಯಾಗಿದ್ದಾರೆ..