ಸ್ಯಾಂಡಲ್‌ವುಡ್‌ನ ಈ ಖ್ಯಾತ ವಿಲನ್ ನೆನಪುಂಟೆ? ಇವರ ಮೊದಲ ಪತ್ನಿ ಆ ಸ್ಟಾರ್ ಹೀರೋಯಿನ್... ಯಾರು ಗೊತ್ತೇ !
ರಘುವರನ್ ಕನ್ನಡದ ಅನೇಕ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಪ್ರಿಯರ ಮನಗೆದ್ದಿದ್ದಾರೆ.
ರಘುವರನ್ ಪತ್ನಿ ತೆಲುಗಿನಲ್ಲಿ ಸ್ಟಾರ್ ನಟಿ. ಹೌದು, ರಘುವರುಣ್ ಪತ್ನಿ ರೋಹಿಣಿ ಒಂದು ಕಾಲದಲ್ಲಿ ಖ್ಯಾತ ಹೀರೋಯಿನ್.
ಬಹುತೇಕ ಎಲ್ಲಾ ತೆಲುಗು ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಬಾಹುಬಲಿಯಲ್ಲಿ ಪ್ರಭಾಸ್ ತಾಯಿಯ ಪಾತ್ರವನ್ನು ರೋಹಿಣಿ ನಿರ್ವಹಿಸಿದ್ದಾರೆ.
ರಘುವರನ್ ಅವರನ್ನು ಪ್ರೀತಿಸಿ 1996 ರಲ್ಲಿ ರೋಹಿಣಿ ವಿವಾಹವಾದರು. ಆದರೆ ಎಂಟು ವರ್ಷಗಳ ನಂತರ ಅಂದರೆ 2004ರಲ್ಲಿ ಇವರಿಬ್ಬರೂ ಬೇರ್ಪಟ್ಟರು.
ಅವರಿಗೆ ಒಬ್ಬ ಮಗನಿದ್ದಾನೆ. ಅಂದಿನಿಂದ ರಘುವರನ್ ಮತ್ತು ರೋಹಿಣಿ ಒಂಟಿ ಜೀವನ ನಡೆಸುತ್ತಿದ್ದರು. ರಘುವರನ್ 2008 ರಲ್ಲಿ ನಿಧನರಾದರು.