ನನ್ನ ಸಂಗಾತಿ ಸತ್ತಿರಬಹುದು.! ಇಂತಹದ್ದೊಂದು ವಿಡಿಯೋ ಮಾಡಿದ್ದೇಕೆ ನಟಿ ರಮ್ಯಾ?
ಮೋಹಕ ತಾರೆ ನಟಿ ರಮ್ಯಾ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಸಂಗಾತಿ ಕುರಿತಾದ ಹಾಡೊಂದನ್ನು ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಹಂಚಿಕೊಂಡಿದ್ದರು. ಇದೀಗ ಅದೇ ಹಾಡಿಗೆ ರೀಲ್ಸ್ ಮಾಡಿದ್ದಾರೆ.
ಈ ಹಾಡು ಬ್ರೇಕ್ಅಪ್ ಪ್ರೇಮಕಹಾನಿಗೆ ಹಾಡುವಂತಿದೆ. ಹಳೆಯ ಸಂಗಾತಿಯನ್ನು ನೆನಪಿಸಿಕೊಳ್ಳುವಂತಹ ಹಾಡಿನ ರೀಲ್ಸ್ ಅನ್ನು ರಮ್ಯಾ ಮಾಡಿದ್ದಾರೆ.
ಯಾಕೆ ನೀನಿನ್ನೂ ಮದುವೆಯಾಗಿಲ್ಲ… ಎಂಬ ಪ್ರಶ್ನಾರ್ಥಕ ಸಾಹಿತ್ಯ ಹೊಂದಿರುವ ಈ ಇಂಗ್ಲಿಷ್ ಹಾಡಿಗೆ ರಮ್ಯಾ ರೀಲ್ಸ್ ಮಾಡಿದ್ದಾರೆ.
ರಮ್ಯಾ ರೀಲ್ಸ್ ಮಾಡಿರುವ ಹಾಡು, ನನ್ನ ಸಂಗಾತಿ ಸತ್ತಿರಬಹುದು… ಇಲ್ಲ ನನಗೆ ಸಂಗಾತಿನೇ ಹುಟ್ಟಿಲ್ಲ ಎಂಬ ಸಾಹಿತ್ಯದೊಂದಿಗೆ ಮುಂದುವರೆಯುತ್ತದೆ.
ಯುವ ಗಾಯಕ ಐನಾಟ್ಶೇನ್ ಹಾಡಿರುವ ಈ ಹಾಡು ಭಗ್ನ ಪ್ರೇಮಿಗಳಿಗೆ ಮಾಡಿಸಿದಂತಿದೆ.