ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ.. ಇವರ ತಂದೆ ತುಂಬಾನೇ ಫೇಮಸ್!
ದಿವ್ಯ ಸ್ಪಂದನ 29 ನವೆಂಬರ್ 1982 ರಂದು ರಮ್ಯಾ ಜನಿಸಿದರು. ಸಿನಿರಂಗಕ್ಕೆ ಎಂಟ್ರಿ ಕೊಡುವಾಗ ಇವರ ಹೆಸರನ್ನು ರಮ್ಯಾ ಎಂದು ಪಾರ್ವತಮ್ಮ ಬದಲಿಸಿದರಂತೆ.
ರಮ್ಯಾ ಅವರ ತಾಯಿ ರಂಜಿತಾ ಬೋರಯ್ಯ ಪ್ರಭಾವಿ ನಾಯಕ ಎಸ್ಎಂ ಕೃಷ್ಣ ಅವರ ಅತ್ಯಾಪ್ತರು. ಮಂಡ್ಯ ಕಾಂಗ್ರೆಸ್ಸಿನಲ್ಲಿ ಸಕ್ರಿಯ ರಂಜಿತಾ ಸದಸ್ಯೆ ಕೂಡ ಹೌದು.
ನಟಿ ರಮ್ಯಾ 2003 ರಲ್ಲಿ ಅಪ್ಪು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.
ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ರಮ್ಯಾ ನಟಿಸಿದ್ದಾರೆ, ಕೇವಲ ಸಿನಿರಂಗ ಮಾತ್ರವಲ್ಲದೇ ರಾಜಕೀಯದಲ್ಲೂ ಗುರುತಿಸಿಕೊಂಡವರು, ರಮ್ಯಾ ಮಂಡ್ಯ ಸಂಸದೆ ಆಗಿದ್ದರು.
ನಟಿ ರಮ್ಯಾ ಅವರ ತಂದೆ ಆರ್. ಟಿ.ನಾರಾಯಣ್. ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಆರ್. ಟಿ.ನಾರಾಯಣ್ ಅವರು ಕಿಚನ್ ಕ್ಯಾಬಿನೆಟ್ ಪ್ರಮುಖ ಸದಸ್ಯರಾಗಿದ್ದರು.
ನಾರಾಯಣ್ ಅನುಮತಿಯಲ್ಲದೆ ವಿಧಾನಸೌಧದಲ್ಲಿ ಹುಲ್ಲಕಡ್ಡಿಯೂ ಅಲುಗಾಡುತ್ತಿರಲಿಲ್ಲ ಎಂಬಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದರು.
ಆದರೆ ಇಲ್ಲೊಂದು ಗಮನಾರ್ಹ ವಿಷಯ ಎಂದರೆ ನಟಿ ರಮ್ಯಾ 5 ವರ್ಷದ ಬಾಲಕಿ ಆಗಿದ್ದಾಗಲೇ ಮಂಡ್ಯದಿಂದ ಆಕೆಯನ್ನು ಮೈಸೂರಿಗೆ ಕರೆತಂದು ನಾರಾಯಣ್ ಸಾಕಿದ್ದರು ಎನ್ನಲಾಗುತ್ತದೆ.
ನಟಿ ರಮ್ಯಾ ಇದುವರೆಗೂ ಎಲ್ಲಿಯೂ ತಮ್ಮ ತಂದೆಯ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ ಎಂಬುದು ಗಮನಾರ್ಹ.