ವಯಸ್ಸು 40 ದಾಟಿದ್ರೂ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮದುವೆ ಆಗದಿರಲು ಕಾರಣವೇನು ಗೊತ್ತೇ !
Sandalwood Queen Ramya: ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ... ವಯಸ್ಸು 41 ಆದರೂ ಇನ್ನೂ ಮದುವೆ ಮಾತ್ರ ಆಗಿಲ್ಲ.
ಕನ್ನಡ ಸಿನಿರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳಲ್ಲಿ ನಟಿ ರಮ್ಯಾ ಸಹ ಒಬ್ಬರು. ಸ್ಯಾಂಡಲ್‌ವುಡ್ ಕ್ವೀನ್ ಮದುವೆ ಕುರಿತು ಆಗಾಗ ಅನೇಕ ವದಂತಿಗಳು ಹಬ್ಬುತ್ತವೆ.
ನಟಿ ರಮ್ಯಾಗೆ ಎಲ್ಲೇ ಹೋದರು ಕೇಳುವ ಪ್ರಶ್ನೆ ಒಂದೇ ಮದುವೆ ಯಾವಾಗ. ಇದಕ್ಕೆ ಹಲವು ಬಾರಿ ರಮ್ಯಾ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ.
ನಟಿ ರಮ್ಯಾ 41 ವರ್ಷ ವಯಸ್ಸಾದರೂ ಯಾಕಿನ್ನೂ ಸಿಂಗಲ್ ಆಗಿದ್ದಾರೆ ಎಂಬುದು ಅನೇಕರ ಕುತೂಹಲ. ಇದಕ್ಕೆ ಒಂದು ಕಾರಣವಿದೆ.
ರಮ್ಯಾ ಸಿನಿಮಾ ಮಾತ್ರವಲ್ಲ ರಾಜಕೀಯದಲ್ಲೂ ಬ್ಯುಸಿಯಾಗಿರುವವರು. ಕಾಂಗ್ರೆಸ ಪಕ್ಷದಲ್ಲಿರುವ ರಮ್ಯಾ, ಕೆಲ ಕಾಲ ವಿದೇಶದಲ್ಲಿ ನೆಲೆಸಿದ್ದರು. ಬಳಿಕ ಮತ್ತೆ ಕರ್ನಾಟಕಕ್ಕೆ ಬಂದು ಕನ್ನಡ ಸಿನಿರಂಗದಲ್ಲಿ ನಿರ್ಮಾಪಕರಾಗಿದ್ದಾರೆ.
ಸಿನಿಮಾ, ರಾಜಕೀಯ ಎರಡರಲ್ಲೂ ಬ್ಯುಸಿಯಾಗಿರುವ ರಮ್ಯಾ ಕುಟುಂಬದ ಕಡೆ ಸಂಪೂರ್ಣ ಸಮಯ ಕೊಡಲು ಕಷ್ಟ ಸಾಧ್ಯ. ಇದೇ ಕಾರಣಕ್ಕೆ ಮದುವೆಯಿಂದ ದೂರವಿರಬಹುದು ಎಂದು ಅನೇಕರು ಭಾವಿಸಿದ್ದಾರೆ.
ರಮ್ಯಾ ಈ ಹಿಂದೆ ಒಂದು ಕಾಲೇಜು ಕಾರ್ಯಕ್ರಮದಲ್ಲಿ ಮದುವೆ ಬಗ್ಗೆ ಮಾತನಾಡಿ ಗಮನಸೆಳೆದಿದ್ದರು. ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಮದುವೆ ಯಾಕೋ ಆಗಬೇಕು ಎಂದು ರಮ್ಯಾ ಉತ್ತರಿಸಿದ್ದರು.
ಹ್ಯಾಪಿ ಆಗಿರೋದು ಅಥವಾ ಮದುವೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಅದಕ್ಕೆ ನಾನು ಸಂತೋಷವಾಗಿರುವುದನ್ನೆ ಆಯ್ಕೆ ಮಾಡುತ್ತೇನೆ ಎಂದು ರಮ್ಯಾ ಹೇಳಿದ್ದರು.