ಸ್ಯಾಂಡಲ್‌ವುಡ್‌ ಟ್ಯಾಲೆಂಟೆಡ್‌ ಡೈರೆಕ್ಟರ್‌ ಕಾಶಿನಾಥ್‌ ಅವರ ಪತ್ನಿ ಯಾರು ಗೊತ್ತಾ?

Mon, 11 Nov 2024-10:38 am,

Director Kashinath Wife and son details: ಸ್ಯಾಂಡಲ್‌ವುಡ್‌ ಟ್ಯಾಲೆಂಟೆಡ್‌ ಡೈರೆಕ್ಟರ್‌ ಕಾಶಿನಾಥ್‌ ಪತ್ನಿ ಯಾರು ಮತ್ತು ಅವರ ಪುತ್ರನ ಬಗ್ಗೆ ಇಲ್ಲಿದೆ ನಿಮಗೆ ತಿಳಿಯದ ಮಾಹಿತಿ..

ಕನ್ನಡ ಸಿನಿಮಾ ರಂಗದ ದಿಕ್ಕನ್ನೇ ಬದಲಿಸಿದ ಟ್ಯಾಲೆಂಟೆಡ್‌ ಡೈರೆಕ್ಟರ್‌ ಕಾಶಿನಾಥ್.‌ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾಗಿದ್ದವರು. ಕುಂದಾಪುರ ಸಮೀಪದ ಕೋಟೇಶ್ವರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಾಶೀನಾಥ್‌ ಸ್ಯಾಂಡಲ್‌ವುಡ್‌ನ ಮರೆಯಲಾಗದ ಅಧ್ಯಾಯ.

ಆ ಕಾಲದಲ್ಲಿ ಚಿತ್ರರಂಗದಲ್ಲಿದ್ದ ಮಡಿವಂತಿಕೆಗೆ ಬ್ರೇಕ್‌ ಕೊಟ್ಟು ಹೊಸ ರೀತಿಯ ಸಿನಿಮಾಗಳಿಗೆ ನಾಂದಿ ಹಾಡಿದವರು ನಿರ್ದೇಶಕ ಕಾಶಿನಾಥ್. ಉಪೇಂದ್ರ, ಮನೋಹರ್, ಸುನೀಲ್‍ಕುಮಾರ್ ದೇಸಾಯಿ ಅಂತಹ ಪ್ರತಿಭಾನ್ವಿತ ನಿರ್ದೇಶಕರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದವರು. 

ಅಜಗಜಾಂತರ, ಅನಂತನ ಅವಾಂತರ, ಶ್ !!, ಚೌಕ ಹೀಗೆ ವಿಭಿನ್ನ ಸಿನಿಮಾಗಳನ್ನು ಮಾಡಿದ ಖ್ಯಾತಿ ನಿರ್ದೇಶಕ ಕಾಶಿನಾಥ್‌ ಅವರಿಗೆ ಸಲ್ಲುತ್ತದೆ. ಕಾಶಿನಾಥ್‌ನಿರ್ದೇಶಕರಾಗಿ ಮಾತ್ರವಲ್ಲ ನಟನೆಯ ಮೂಲಕವೂ ಜನರ ಮನಸ್ಸಿಗೆ ಹತ್ತಿರವಾಗಿದ್ದರು.

ಕಾಶೀನಾಥ್‌ ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಮೂರು ದಶಕಗಳವರೆಗೆ ಸಿನಿಮಾರಂಗದಲ್ಲಿ ನಿರತರಾಗಿದ್ದರು. ದ್ವಂದ್ವಾರ್ಥಗಳನ್ನು ಹೊಂದಿದ ಸಂಭಾಶಷಣೆಗಳಿಂದಲೇ ಕಾಶೀನಾಥ್‌ ಹಲವು ಬಾರಿ ಟೀಕೆಗಳನು ಎದುರಿಸಿದ್ದರು.

ಇಷ್ಟೆಲ್ಲ ಖ್ಯಾತಿ ಪಡೆದ ಕಾಶೀನಾಥ್‌ ಅವರ ಪತ್ನಿ ಮತ್ತು ಮಗ ಯಾರೆಂಬುದು ಕೆಲವರಿಗೆ ತಿಳಿದಿಲ್ಲ. ಕಾಶಿನಾಥ್‌ ಪತ್ನಿ ಹೆಸರು ಚಂದ್ರಪ್ರಭಾ. 

ಕಾಶಿನಾಥ್‌ ಪುತ್ರ ಅಭಿಮನ್ಯು ಕಾಶಿನಾಥ್‌. ಇವರು ಕೂಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸೂರಿ ಲವ್ಸ್ ಸಂಧ್ಯಾ, ಎಲ್ಲಿಗೆ ಪಯಣ ಯಾವುದೋ ದಾರಿ ಹೀಗೆ ಅನೇಕ ಚಿತ್ರಗಳಲ್ಲಿ ಅಭಿಮನ್ಯು ಕಾಶಿನಾಥ್‌ ತಮ್ಮ ಪ್ರತಿಭೆ ತೋರಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link