ವಿಶ್ವದ ಶ್ರೀಮಂತ ವ್ಯಕ್ತಿಯ ಮಗನ ಮದುವೆಯಲ್ಲಿ ಸಾಮಾನ್ಯ ಬಸ್ ಡ್ರೈವರ್‌ನ ಮಗ..! ಸಾಧನೆ ಅಂದ್ರೆ ಇದಪ್ಪಾ ಎಂದ ನೆಟ್ಟಿಗರು
ಜುಲೈ 13 ರಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮೆರ್ಚೆಂಟ್ ಅವರ ವಿವಾಹ ಸಮಾರಂಭ ನೆರವೇರಿತು. ದೇಶಿ ಆಗಿ ವೇದಿಶಿ ಸ್ಟಾರ್ ಗಳಿಗೆ ಈ ಸಮಾರಂಭಕ್ಕಾಗಿ ಆಹ್ವಾನ ನೀಡಲಾಗಿತ್ತು.
WWE ಖ್ಯಾತಿಯ ಜಾನ್ ಸೀನ ದಿಂದ ಹಿಡಿದು ಇಂಗ್ಲಿಷ್ ವೆಬ್ ಸೇರಿಸ್ ಖ್ಯಾತಿಯ ಕರ್ದಾಶಿಯನ್ ಸಹೋದರಿಯರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಇವರಷ್ಟೇ ಅಲ್ಲದೇ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿ ಸ್ಟಾರ್ ನಟ ನಟಿಯರು ಮದುವೆಯ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಖ್ಯಾತ ಉದ್ಯಮಿಗಳಸ್ಟೆ ಅಲ್ಲದೆ ಪ್ರಧಾನಿ ಮೋದಿ ಕೂಡ ಮದುವೆಗೆ ಹಾಜರ್ ಆಗಿ ನವ ದಂಪತಿಗಳನ್ನು ಆಶೀರ್ವದಿಸಿದರು.
ಆದರೆ ಇಲ್ಲಿ ಅಚ್ಚರಿ ಪಡುವ ವಿಷಯ ಏನು ಅಂದ್ರೆ ಸ್ಯಾಂಡಲ್ವುಡ್ ನಿಂದ ರಾಕಿ ಭಾಯ್ ಯಶ್ ಮಾತ್ರ ಈ ಮದುವೆ ಸಮಾರಂಭದಲ್ಲಿ ಪತ್ನಿ ರಾಧಿಕರೊಂದಿಗೆ ಭಾಗಿಯಾಗಿದ್ದರು.
ಸಧ್ಯಾ ಸ್ಯಾಂಡಲ್ವುಡ್ ನಿಂದ ಯಶ್ ಒಬ್ಬರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದು ಹೇಳಲಾಗ್ತ ಇದ್ದು, ಯಶ್ ಹಾಗೂ ರಾಧಿಕಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಅನಂತ್ ಮದುವೆಯಲ್ಲಿ ಸ್ಟಾರ್ ನಿರ್ಮಾಪಕರ ಜೊತೆ ಯಶ್ ಕೂತು ಮಾತನಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.