ಸಾನಿಯಾ ಮಿರ್ಜಾ ಜೊತೆ ಮೊಹಮ್ಮದ್ ಶಮಿ ಮದುವೆ? ಟೆನ್ನಿಸ್ ತಾರೆಯ ತಂದೆ ಕೊಟ್ರು ಬಿಗ್ ಅಪ್‌ಡೇಟ್
ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಟೀಮ್ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಇಬ್ಬರೂ ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಹರಿದಾಡುತ್ತಿವೆ. ಈ ವದಂತಿಗಳ ಬಗ್ಗೆ ಸಾನಿಯಾ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಸಾನಿಯಾ ತಂದೆ ಇಮ್ರಾನ್ ಮಿರ್ಜಾ ತಮ್ಮ ಮಗಳ ಮದುವೆ ವಿಚಾರ ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ಮೊಹಮ್ಮಸ್ ಶಮಿಯನ್ನು ಸಾನಿಯಾ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ. ಈ ಊಹಾಪೋಹಗಳ ನಡುವೆ ಸಾನಿಯಾ ಸದ್ಯ ಹಜ್ ಯಾತ್ರೆಯಲ್ಲಿದ್ದಾರೆ.
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಮೊಹಮ್ಮದ್ ಶಮಿ ಮದುವೆಯಾದಂತೆ ಬಿಂಬಿಸುವ ಕೆಲವು ಎಡಿಟೆಡ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆಗಿದ್ದವು.
ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಇಬ್ಬರೂ ತಮ್ಮ ಮೊದಲ ಮದುವೆಯಿಂದ ವಿಚ್ಛೇದನ ಪಡೆದಿದ್ದಾರೆ. ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ತಮ್ಮ ಮಾಜಿ ಪತ್ನಿ ಹಸೀನ್ ಜಹಾನ್ ಮತ್ತು ಸಾನಿಯಾ ಮಿರ್ಜಾ ಮೊದಲ ಪತಿ ಪಾಕ್ ಕ್ರಿಕೆಟರ್ ಶೋಯೆಬ್ ಮಲಿಕ್.
ಈ ವರ್ಷದ ಆರಂಭದಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ನಿಂದ ಸಾನಿಯಾ ಬೇರ್ಪಟ್ಟರು ಮತ್ತು ಶಮಿ ಅವರ ಪತ್ನಿ ಹಸಿನ್ ಜಹಾನ್‌ಗೆ ವಿಚ್ಛೇದನ ಕೊಟ್ಟ ಬೆನ್ನಲ್ಲೇ ಈ ವದಂತಿಗಳು ಹಬ್ಬಿವೆ.
ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಈ ವಿವಾಹ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. "ಇದೆಲ್ಲವೂ ವದಂತಿ. ಅವಳು ಅವನನ್ನು ಭೇಟಿ ಮಾಡಿಲ್ಲ" ಎಂದು ತಿಳಿಸಿದ್ದಾರೆ.