`ನಿನ್ನನ್ನು ತುಂಬಾ ಮಿಸ್‌ ಮಾಡ್ಕೊತಿದ್ದೇನೆ`- ಕಳೆದ ಪ್ರೀತಿಗೆ ಮಿಡಿಯುತ್ತಿದೆ ಸಾನಿಯಾ ಮಿರ್ಜಾ ಮನ! ಮೂಗುತಿ ಸುಂದರಿ ಹೀಗಂದಿದ್ದು ಇವರಿಗೆ ನೋಡಿ...

Tue, 26 Nov 2024-2:58 pm,

ಶೋಯೆಬ್ ಮಲಿಕ್‌ನಿಂದ ವಿಚ್ಛೇದನ ಪಡೆದ ನಂತರ, ಸಾನಿಯಾ ಮಿರ್ಜಾ ತಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ ಸದ್ಯ ದುಬೈನಲ್ಲಿ ವಾಸಿಸುತ್ತಿರುವ ಅವರು, ಆಗಾಗ್ಗೆ ತನ್ನ ಸಹೋದರಿಯ ಮಕ್ಕಳೊಂದಿಗೆ ಕ್ಷಣಗಳನ್ನು ಕಳೆಯುವುದನ್ನು ಕಾಣಬಹುದು.

ಇತ್ತೀಚೆಗಷ್ಟೇ ಅವರ ಪುತ್ರ ಇಜಾನ್ ತಮ್ಮ ಹುಟ್ಟುಹಬ್ಬವನ್ನು ತಾಯಿ ಮತ್ತು ತಂದೆ ಇಬ್ಬರೊಂದಿಗೆ ಪ್ರತ್ಯೇಕವಾಗಿ ಆಚರಿಸಿಕೊಂಡಿದ್ದರು. ಶೋಯೆಬ್ ಮಲಿಕ್ ಕೂಡ ದುಬೈನಲ್ಲಿ ನೆಲೆಸಿದ್ದಾರೆ. ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ಅವರ ಪ್ರತಿಯೊಂದು ಪೋಸ್ಟ್ ಅನ್ನು ಅಭಿಮಾನಿಗಳು ಇಷ್ಟಪಡುತ್ತಾರೆ.

 

ಇತ್ತೀಚೆಗಷ್ಟೇ ಸಾನಿಯಾ ಅವರ ವಿಶೇಷ ಸ್ನೇಹಿತರೊಬ್ಬರಾದ ಇಬ್ಬಾ ಖುರೇಷಿ ದುಬೈಗೆ ಬಂದಿದ್ದರು. ಸಾನಿಯಾಳನ್ನು ಭೇಟಿಯಾಗಿ ಇಬ್ಬರೂ ಅತ್ಯುತ್ತಮ ಕ್ಷಣಗಳನ್ನು ಕಳೆದಿದ್ದರು. ಇದೀಗ ಇಬ್ಬಾ ಹಿಂತಿರಗಿದ್ದು, ಸಾನಿಯಾ ಹಾಗೂ ಮಕ್ಕಳ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

 

"ನಾನು ಆ ಸ್ನೇಹಶೀಲ ದಿನಗಳನ್ನು ಮತ್ತು ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.  

 

ಇತ್ತೀಚೆಗೆ ಸಾನಿಯಾ ಮಿರ್ಜಾ ಅವರನ್ನು ದುಬೈ ಸ್ಪೋರ್ಟ್ಸ್‌ನ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಲಾಗಿದೆ. ಕಾರ್ಯಕ್ರಮವೊಂದರಲ್ಲಿ ಸಾನಿಯಾಗೆ ಈ ಜವಾಬ್ದಾರಿ ನೀಡಲಾಗಿತ್ತು. ಸಾನಿಯಾ ಮಿರ್ಜಾ ದುಬೈನಲ್ಲಿ ಕ್ರೀಡಾ ವಿಭಾಗದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅವರ ಟೆನಿಸ್ ಅಕಾಡೆಮಿಯೂ ಅಲ್ಲಿ ಸಕ್ರಿಯವಾಗಿದ್ದು, ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಿರುತ್ತಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link