ಶಮಿ ಜೊತೆ ಸಾನಿಯಾ ಮದುವೆ! ಕೊನೆಗೂ ಪೋಸ್ಟ್ ಶೇರ್ ಮಾಡಿ ಸಿಹಿಸುದ್ದಿ ಕೊಟ್ಟೇಬಿಟ್ರಾ ಮೂಗುತಿ ಸುಂದರಿ?

Mon, 24 Jun 2024-2:52 pm,

ಕೆಲ ದಿನಗಳ ಹಿಂದೆಯಷ್ಟೇ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮತ್ತು ಕ್ರಿಕಟಿಗ ಮೊಹಮ್ಮದ್ ಶಮಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡಿತ್ತು.

ಈ ಬೆನ್ನಲ್ಲೇ ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಹೇಳಿಕೆ ನೀಡಿ, “ಇದೆಲ್ಲಾ ಸುಳ್ಳು ಸುದ್ದಿ, ಇದೆಲ್ಲವೂ ಮೂರ್ಖತನ. ಸಾನಿಯಾ ಶಮಿಯನ್ನೂ ಭೇಟಿಯೂ ಮಾಡಿಲ್ಲ” ಎಂದು ವದಂತಿಯನ್ನು ಅಲ್ಲಗಳೆದಿದ್ದರು.

ಆದರೆ ಇದೀಗ ಸಾಮಿಯಾ ಮಿರ್ಜಾ ಅವರೇ ಸ್ವತಃ ತಮ್ಮ ಇನ್​’ಸ್ಟಾಗ್ರಾಂ​ ಖಾತೆಯಲ್ಲಿ ಸ್ಟೋರಿ ಒಂದನ್ನು ಪೋಸ್ಟ್ ಮಾಡಿದ್ದು ಮಾರ್ಮಿಕವಾಗಿ ಏನನ್ನೋ ಹೇಳಲು ಮುಂದಾಗಿದ್ದಾರೆ.

ಶಮಿ ಜತೆ ಸಾನಿಯ ಮದುವೆ ವದಂತಿ ಬೆನ್ನಲ್ಲೇ ತಮ್ಮ ಇನ್​’ಸ್ಟಾಗ್ರಾಂ​ ಖಾತೆಯಲ್ಲಿ “The Answer is Sabr, it’s Always Sabr” ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ‘ಯಾವಾಗಲೂ ಕೊಂಚ ತಾಳ್ಮೆಯಿಂದ ಇರಿ’ ಎಂದು.

ಇನ್ನು ಈ ಮಾರ್ಮಿಕ ಪೋಸ್ಟ್​ ಕಂಡ ನೆಟ್ಟಿಗರು ಸಾನಿಯಾ ಮತ್ತು ಶಮಿ ದಾಂಪತ್ಯ ಜೀವನಕ್ಕೆ ಕಾಲಿಡುವುದು ಪಕ್ಕಾ ಎಂದು ಹೇಳಲಾರಂಭಿಸಿದ್ದಾರೆ.

ಅಂದಹಾಗೆ ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶೋಯೆಬ್‌ ಮಲಿಕ್‌’ಗೆ ಸಾನಿಯಾ ವಿಚ್ಚೇದನ ನೀಡಿದ್ದರು. ಈ ಮೂಲಕ 13 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link