ತೆಲುಗು ಸೂಪರ್ ಸ್ಟಾರ್ ಜೊತೆ ಸಾನಿಯಾ ಮಿರ್ಜಾ ಡೇಟಿಂಗ್..! ಶೀರ್ಘ್ರದಲ್ಲೇ ಮದುವೆ ಅನೌನ್ಸ್‌..

Wed, 08 Jan 2025-9:04 pm,

ಕೆಲವು ವರ್ಷಗಳ ಹಿಂದೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟೆನಿಸ್ ಅಂಕಣದಲ್ಲಿ ಸತತ ಗೆಲುವಿನ ಮೂಲಕ ಸುದ್ದಿಯಲ್ಲಿರುತ್ತಿದ್ದರು. ಈಗ ಈ ಸುಂದರಿಯ ವೈಯಕ್ತಿಕ ಜೀವನ ಮತ್ತು ಸಂಬಂಧದ ಬಗ್ಗೆ ಊಹಾಪೋಹಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.   

ಸಾನಿಯಾ 14 ವರ್ಷಗಳ ಹಿಂದೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಕ್ರೀಡಾ ಲೋಕದಲ್ಲಿ ವಿಶೇಷ ಆಕರ್ಷಣೆಯಾಗಿದ್ದ ಈ ಸೆಲೆಬ್ರಿಟಿ ಜೋಡಿಯ ದಾಂಪತ್ಯ ಬಾಂಧವ್ಯ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವು ವರ್ಷಗಳ ಹಿಂದೆ ಡಿವೋರ್ಸ್‌ ಪಡೆದಿದ್ದರು..  

ಶೋಯೆಬ್ ಮಲಿಕ್ ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದಾರೆ ಎಂದು ಸಾನಿಯಾಗೆ ತಿಳಿದಿತ್ತು. ಆದ್ದರಿಂದ ವಿಚ್ಛೇದನಕ್ಕೆ ಒತ್ತಾಯಿಸಿದರು ಎಂದು ಕೆಲವು ವರದಿಗಳು ಹೇಳಿವೆ. ಈ ದಂಪತಿಗೆ ಒಬ್ಬ ಮಗ ಕೂಡ ಜನಿಸಿದ್ದಾನೆ. ಇವರಿಬ್ಬರ ವಿಚ್ಛೇದನದ ಸುದ್ದಿ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿತ್ತು.   

ಈ ಸಂಕಷ್ಟದ ಸಮಯದಲ್ಲಿ ಸಾನಿಯಾಗೆ ಅನೇಕರು ಬೆಂಬಲ ನೀಡಿದರು. ಬ್ರೇಕಪ್ ನಂತರ ಶೋಯೆಬ್ ಮಲಿಕ್ ಮತ್ತೆ ಮದುವೆಯಾದರು. ಆದೇ ರೀತಿ ಸಾನಿಯಾ ಕ್ರಿಕೆಟ್‌ ಆಟಗಾರರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದರ ನಡುವೆ ಸದ್ಯದಲ್ಲೇ ತೆಲುಗು ನಾಯಕನನ್ನು ಮಿರ್ಜಾ ಮದುವೆಯಾಗಲಿದ್ದಾರೆ ಎಂಬ ಹೊಸ ಸುದ್ದಿಗಳು ಹರಿದಾಡುತ್ತಿವೆ.   

ಸಾನಿಯಾ ಜೊತೆಗಿನ ವಿಚ್ಛೇದನದ ನಂತರ ಶೋಯೆಬ್ ಮಲಿಕ್ ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೂ ಮುನ್ನ ಇವರಿಬ್ಬರು ಕೆಲ ಕಾಲ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು.   

ವಿಚ್ಛೇದನ ಪಡೆದಾಗಿನಿಂದ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ. ಇತ್ತೀಚೆಗೆ, ಪಾಕಿಸ್ತಾನಿ ನಟ ನಬೀಲ್ ಜಾಫರ್ ಅವರು ಕಾರ್ಯಕ್ರಮವೊಂದರಲ್ಲಿ ಸಾನಿಯಾ ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಚ್ಛೇದನ ಎಂದರೆ ಜೀವನ ನಿಂತುಹೋಗಿದೆ ಎಂದಲ್ಲ. ಇದೊಂದು ದುರದೃಷ್ಟಕರ ಘಟನೆಯಾದರೂ ಯಾರ ಬದುಕೂ ಕತ್ತಲಾಗಬಾರದು. ಸಾನಿಯಾಗೆ ಒಳ್ಳೆಯ ಸಂಗಾತಿ ಸಿಕ್ಕರೆ ಮತ್ತೆ ಮದುವೆಯಾಗುವುದು ಖಚಿತ. ಶೋಯೆಬ್ ಈಗಾಗಲೇ ಎರಡನೇ ಮದುವೆಯಾಗಿದ್ದಾರೆ ಎಂದು ಅವರು ಹೇಳಿದರು. ಅವರ ಹೇಳಿಕೆ ವೈರಲ್ ಆಗಿದೆ.   

ಇದರ ಬೆನ್ನಲ್ಲೆ, ಸಾನಿಯಾ ಮಿರ್ಜಾ ತೆಲುಗು ಸೂಪರ್ ಸ್ಟಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಗುಸುಗುಸು ಮಾಡುತ್ತಿದ್ದಾರೆ. ನಟನ ಹೆಸರನ್ನು ಬಹಿರಂಗಪಡಿಸದಿದ್ದರೂ, ಅನೇಕ ಅಭಿಮಾನಿಗಳು ಈ ಸಂಬಂಧವು ಮದುವೆವರೆಗೂ ಬರುತ್ತದೆ ಎಂದು ನಂಬುತ್ತಾರೆ.   

ಸಾಮಾಜಿಕ ಮಾಧ್ಯಮ ಬಳಕೆದಾರರ ನಾಯಕ ಯಾರು..? ಎಂದು ತಲೆಕೆಡಿಸಿಕೊಂಡಿದ್ದಾರೆ.. ಈ ವದಂತಿಗಳಿಗೆ ಸಾನಿಯಾ ಮಿರ್ಜಾ ಇನ್ನೂ ಪ್ರತಿಕ್ರಿಯಿಸಿಲ್ಲ. ಅವರು ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಲಿಲ್ಲ. ಈ ಹಿಂದೆ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಸಾನಿಯಾ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಆದರೆ ಇವೆಲ್ಲವೂ ವದಂತಿಗಳು ಎಂಬುದು ನಂತರ ಸ್ಪಷ್ಟವಾಯಿತು.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link